Thursday, July 3, 2025
Google search engine

Homeಅಪರಾಧಖ್ಯಾತ ಗಜಲ್ ಗಾಯಕ ಪಂಕಜ್ ಉಧಾಸ್ ನಿಧನ

ಖ್ಯಾತ ಗಜಲ್ ಗಾಯಕ ಪಂಕಜ್ ಉಧಾಸ್ ನಿಧನ

ಮುಂಬೈ : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಗಜಲ್ ಗಾಯಕ ಪಂಕಜ್ ಉಧಾಸ್ ನಿನ್ನೆ ೧೧ ಗಂಟೆಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೭೨ ವರ್ಷ ವಯಸ್ಸಾಗಿತ್ತು. ೧೭ ಮೇ ೧೯೫೧ರಂದು ಗುಜರಾತ್‌ನ ಜೇಟ್‌ಪುರದಲ್ಲಿ ಜನಿಸಿದ ಪಂಕಜ್ ಉದಾಸ್ ಅವರ ನಿಧನವನ್ನು ಪುತ್ರಿ ನಯಾಬ್ ಉಧಾಸ್ ಖಚಿತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಸರಿ ಇರಲಿಲ್ಲ. ಪಂಕಜ್ ಉದಾಸ್ ಅವರ ನಿಧನದಿಂದ ಚಿತ್ರರಂಗದ ಗಣ್ಯರು ದುಃಖಿತರಾಗಿದ್ದು, ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಶಂಕರ್ ಮಹದೇವನ್ ಆಘಾತಕ್ಕೊಳಗಾಗಿ ಪಂಕಜ್ ಉದಾಸ್ ಅವರ ನಿಧನ ಸಂಗೀತ ಲೋಕಕ್ಕೆ ದೊಡ್ಡ ನಷ್ಟ ಎಂದು ಬಣ್ಣಿಸಿದ್ದಾರೆ.
ಕನ್ನಡದ ಸುದೀಪ್ ಅಭಿನಯದ ಪ್ರಥಮ ಚಿತ್ರ ಸ್ಪರ್ಶ ಚಿತ್ರಕ್ಕೆ ಈರಣ್ಣ ಇಟಗಿಯವರು ರಚಿಸಿದ್ದ ಚಂದಕ್ಕಿಂತ ಚಂದ ನೀನೇ ಸುಂದ ಎನ್ನುವ ಗೀತೆಗೂ ಪಂಕಜ್ ಉಧಾಸ್ ದನಿಯಾಗಿದ್ದರು. ಚಿಟ್ಟಿ ಆಯಿ ಹೈ ಅವರ ಜನಪ್ರಿಯ ಗಜಲ್‌ಗಳಲ್ಲಿ ಒಂದಾಗಿದೆ.

RELATED ARTICLES
- Advertisment -
Google search engine

Most Popular