Sunday, September 7, 2025
Google search engine

Homeಸ್ಥಳೀಯಸಂಶೋಧನಾ ವಿದ್ಯಾರ್ಥಿಗಳಿಂದ ಬಸವನಗಿರಿ ಹಾಡಿಯಲ್ಲಿ ಸರ್ವೆ

ಸಂಶೋಧನಾ ವಿದ್ಯಾರ್ಥಿಗಳಿಂದ ಬಸವನಗಿರಿ ಹಾಡಿಯಲ್ಲಿ ಸರ್ವೆ

ಹೆಚ್.ಡಿ, ಕೋಟೆ : ಪರಿಶಿಷ್ಠ ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳು ಹೆಚ್.ಡಿ. ಕೋಟೆ ತಾಲ್ಲೂಕು ಬಸವನಗಿರಿ ಹಾಡಿಗೆ ಭೇಟಿ ನೀಡಿ ಮನೆಮನೆಗೆ ತೆರಳಿ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ೧೦ ದಿನಗಳ ಕಾಲ ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಇಂದು ಬಸವನಗಿರಿ ಹಾಡಿಗೆ ಭೇಟಿ ನೀಡಿ ಹಾಡಿ ಜನರಿಗೆ ಮನೆ ಇದೆಯೇ? ರಸ್ತೆ, ಕುಡಿಯುವ ನೀರು, ಆಧಾರ್‌ಕಾರ್ಡ್ ಪಡಿತರ ಚೀಟಿ ಇದೆಯೇ?, ಜಮೀನು, ದನಕರುಗಳು, ಟಿ.ವಿ. ಬೈಕ್, ವಿದ್ಯಾವಂತರೆಷ್ಟು ಮಂದಿ ಇದ್ದಾರೆ? ಏನು ಕೆಲಸ ಮಾಡುತ್ತಿದ್ದಾರೆ ಎಂಬ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ರಾಜಕೀಯವಾಗಿ ಅವರ ಜೀವನ ನಿರ್ವಹಣೆ ಹೇಗಿದೆ ಎಂಬ ಸಮಗ್ರ ಮಾಹಿತಿಯ ದತ್ತಾಂಶವನ್ನು ಸಂಗ್ರಹಿಸಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್ ಮಾತನಾಡಿ ಈ ಸರ್ವೆಯಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇವರು ಸಂಗ್ರಹಿಸಿರುವ ದತ್ತಾಂಶವನ್ನು ಇಲಾಖೆಗೆ ಕಳಿಸಲಾಗುವುದು. ಇದು ಪುನರ್‌ವಸತಿ ಹಾಡಿಯಾಗಿದ್ದು ನಾಳೆ ಪುನರ್ ವಸತಿಯಾಗಿಲ್ಲದ ಡಿ.ಬಿ. ಕುಪ್ಪೆ ಹಾಡಿ ವ್ಯಾಪ್ತಿಯಲ್ಲಿ ಸರ್ವೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಲೆಕ್ಕಾಧಿಕಾರಿ ಬಿ.ಎಸ್. ಭವ್ಯ, ಸಂಶೋಧನರಾದ ಡಾ. ಮೋಹನ್‌ಕುಮಾರ್, ಡಾ. ಮಂಜುನಾಥ್, ಡಾ. ಎಸ್. ರವಿಕುಮಾರ್, ಡಾ. ಲೀಲಾವತಿ, ಡಾ. ರತ್ನಮ್ಮ, ಡಾ. ಮಧು ಗುಂಡ್ಲುಪೇಟೆ, ಗಂಗಾಧರ್, ರಮೇಶ್ ಕೆ. ಹಾಜರಿದ್ದರು.

RELATED ARTICLES
- Advertisment -
Google search engine

Most Popular