ವರದಿ: ಸ್ಟೀಫನ್ ಜೇಮ್ಸ್..
ರೆಸಾರ್ಟ್ ರಾಜಕೀಯ ಹೊಸದೇನಲ್ಲ!”- ಸತೀಶ್ ಜಾರಕಿಹೊಳಿ
ಎಲ್ಲ ಚುನಾವಣೆಗಳಿಗೂ ‘ರೆಸಾರ್ಟ್ ರೂಮ್’ ಕಾಯ್ದಿರಿಸಿದ ಸಂಸ್ಕೃತಿ – ಸಹಕಾರದಿಂದ ಪಾರ್ಟಿವರೆಗೂ ಎಲ್ಲೆಡೆ ಅದೇ ಆಟ!
ಬೆಳಗಾವಿ:ರಾಜಕೀಯ ಬಿಸಿ ಮಾತುಗಳಿಗೆ ಹೆಸರುವಾಸಿಯಾದ ಲೋಕೋಪಯೋಗಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ರಾಜಕೀಯ ಮೈದಾನದಲ್ಲಿ ನಗೆಯ ಚಟಾಕಿ ಹಾರಿಸಿದ್ದಾರೆ.
“ನಮ್ಮಲ್ಲಿ ಎಂಎಲ್‌ಎ ಮತ್ತು ಎಂಪಿ ಚುನಾವಣೆಯನ್ನು ಬಿಟ್ಟರೆ ಉಳಿದ ಎಲ್ಲ ಚುನಾವಣೆಯೂ ರೆಸಾರ್ಟ್ ರಾಜಕೀಯದ ಅರೆನಾದಲ್ಲೇ ನಡೆಯುತ್ತವೆ. ಇದು ಈಗ ಬೆಳಗಾವಿಯ ಹೊಸ ನಾರ್ಮಲ್!” ಎಂದು ಅವರು ಹೇಳಿದರು. ಮಾಧ್ಯಮದವರ ಜೊತೆ ಹಾಸ್ಯ ಮಿಶ್ರಿತವಾಗಿ ಮಾತನಾಡಿದ ಅವರು ರೆಸಾರ್ಟ್ ರಾಜಕೀಯ ಇಲ್ಲದೆ ಯಾವುದೇ ಚುನಾವಣೆಯೂ ನಡೆಯುವುದು ಅಸಾಧ್ಯ. ಇದು ಈಗ ನವೀನ ರಾಜಕೀಯ ಎಂದು ಚುಟುಕಾಗಿ ಕಮೆಂಟ್ ಮಾಡಿದರು. ಲಿಂಗಾಯತ ಒಡೆದು ಆಳುತ್ತಿದ್ದಾರೆ”
“ಜಿಲ್ಲೆಯಲ್ಲಿ ಲಿಂಗಾಯತ ಒಡೆದು ಆಳುತ್ತಿದ್ದಾರೆ” ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ ಸತೀಶ್ ಜಾರಕಿಹೊಳಿ ವರು, ಅದು ಚರ್ಚೆ ಅಷ್ಟೇ! ಇಂತಹ ಮಾತುಗಳಿಗೆ ಯಾವುದೇ ಜಿಎಸ್‌ಟಿ ಅಥವಾ ಟ್ಯಾಕ್ಸ್ ಇಲ್ಲ. ಹೀಗಾಗಿ ಎಲ್ಲೆಡೆ ಮಾತನಾಡುತ್ತಾರೆ ಎಂದರು.
ಚುನಾವಣೆ ಅಂದರೆ ಭಯ ಇರಲೇಬೇಕು!”*
ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳಲ್ಲೂ ಸೋಲಿನ ಭಯ ಇರುತ್ತದೆ. ಆದರೆ ಯಾರಿಗೆ ಹೆಚ್ಚು ಭಯವೋ, ಅವರು ಹೆಚ್ಚು ಮತಗಳಿಂದ ಗೆಲ್ಲುತ್ತಾರೆ.
ಎಲ್ಲೆಡೆ ಹೊಂದಾಣಿಕೆ ಸಾಧ್ಯವಿಲ್ಲ – ಕೆಲ ಕಡೆ ಕ್ರಾಸ್ ಮತಗಳ ಮಳೆ” ಜಿಲ್ಲೆಯ ಸಹಕಾರ ಚುನಾವಣೆಯ ರಾಜಕೀಯ ಸಮೀಕರಣಗಳ ಕುರಿತು ಮಾತನಾಡಿದ ಸಚಿವರು,
“ಕೆಲವೆಡೆ ಹೊಂದಾಣಿಕೆ ಆಗಿದೆ, ಆದರೆ ಕೆಲವು ಕಡೆ ಅದು ಅಸಾಧ್ಯ.
ನಿಪ್ಪಾಣಿ, ಹುಕ್ಕೇರಿ, ರಾಮದುರ್ಗಗಳಲ್ಲಿ ಕ್ರಾಸ್ ಮತದಾನ ಬೆಳಗಾವಿಯ ಸಂಸ್ಕೃತಿ. ಅಲ್ಲಿ ಇದ್ದವರು ಇಲ್ಲಿ, ಇಲ್ಲಿ ಇದ್ದವರು.
ಅಲ್ಲಿ ಮತ ಹಾಕುವುದು ಸಾಮಾನ್ಯ!”
ಎಂದು ನಗುತ್ತಲೇ ಹೇಳಿದರು.
ಯಾರ ಮೇಲೆ ಪ್ರೀತಿ ಹೆಚ್ಚಿದೆಯೋ ಅವರೇ ಗೆಲ್ಲುತ್ತಾರೆ”
ಕಿತ್ತೂರು ಕ್ಷೇತ್ರದ ಪ್ರಶ್ನೆಗೆ ಅವರು ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದ ಅವರು,ಆದರೆ ಗೆಲುವು ಯಾವ ಪ್ರಚಾರದಿಂದಲೂ
ಅಲ್ಲ – ಜನರ ಹೃದಯದಿಂದ ಬರುತ್ತದೆ.
ಯಾರ ಮೇಲೆ ಪ್ರೀತಿ ಹೆಚ್ಚಿದೆಯೋ, ಅವರೇ ಅಲ್ಲಿ ಗೆಲ್ಲುತ್ತಾರೆಂದರು. ಭಯವಲ್ಲ* ಲೆಕ್ಕಾಚಾರ”*
ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಶಾಸಕ ಅಶೋಕ ಪಟ್ಟಣ ನಾಮಪತ್ರ ಹಿಂತೆಗೆದುಕೊಂಡ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಚಿವರು, “ಅವರು ಕಣದಲ್ಲಿ ಉಳಿದಿದ್ದರೆ ಖಂಡಿತ ಗೆಲ್ಲುತ್ತಿದ್ದರು.
ಆದರೆ ಅವರು ಸೋತರೆ ಮುಂದೆ ಸಂಪುಟ ಸ್ಥಾನಕ್ಕೆ ತೊಂದರೆ ಆಗಬಹುದೆಂಬ ಆತಂಕದಿಂದ ಹಿಂತೆಗೆದುಕೊಂಡಿದ್ದಾರೆ.
ನಾವು ಅಕ್ಟೋಬರ್ 19ರವರೆಗೆ ಅವರ ಜೊತೆ ಚರ್ಚೆ ನಡೆಸಿದ್ದೆವು,” ಎಂದು ಹೇಳಿದರು.
ನಿಪ್ಪಾಣಿಯಲ್ಲಿ ಜೊಲ್ಲೆ ಪರ ನಿಂತಿದ್ದೇವೆ”
ನಿಪ್ಪಾಣಿಯಲ್ಲಿ ಉತ್ತಮ ಪಾಟೀಲ ಅವರಿಗೆ ಸಹಾಯ ಮಾಡಲು ಆಗುವುದಿಲ್ಲವೆಂದು ಮೊದಲೆ ಹೇಳಿದ್ದೇನೆ
ರೆಸಾರ್ಟ್ ರಾಜಕೀಯದ ನೂತನ ವ್ಯಾಖ್ಯಾನ:*
ಬೆಳಗಾವಿಯ ಸಹಕಾರ ರಾಜಕೀಯದಲ್ಲಿ ಈಗ ರೆಸಾರ್ಟ್ ರಾಜಕೀಯ ನೂತನ ಪದವಲ್ಲ ಅದು ನೂತನ ಸಂಸ್ಕೃತಿ.
ಆದರೆ ಅದನ್ನು ವ್ಯಂಗ್ಯದಿಂದ “ಸಾಮಾನ್ಯ” ಎಂದು ಘೋಷಿಸುವ ಸತೀಶ್ ಜಾರಕಿಹೊಳಿ ಅವರ ನುಡಿಗೆ ತೂಕವಿದೆ.
ಅವರು ಹೇಳಿದಂತೆ- ಭಯ, ಪ್ರೀತಿ, ಮತ್ತು ರಾಜಕೀಯ- ಈ ಮೂರರ ಮಿಶ್ರಣವೇ ಗೆಲುವಿನ ಗುಟ್ಟು!
: ಸತೀಶ್ ಜಾರಕಿಹೊಳಿ ಅವರ ಇತ್ತೀಚಿನ ನುಡಿಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ
ಅವು ಬೆಳಗಾವಿಯ ರಾಜಕೀಯ ಮನೋವಿಜ್ಞಾನದ ನಿಖರ ಚಿತ್ರ.
ರೆಸಾರ್ಟ್‌ಗಳ ಹಾಸಿಗೆಗಳಲ್ಲಿ ನಡೆಯುವ ರಾಜಕೀಯಕ್ಕೂ ವ್ಯಂಗ್ಯವಿತ್ತು,
ಜನರ ಪ್ರೀತಿಯ ಮೇಲುಗೈಗೂ ತಾತ್ವಿಕ ಬಣ್ಣವಿತ್ತು.
ಬೆಳಗಾವಿಯ ರಾಜಕೀಯದಲ್ಲಿ ನಗು ಕೂಡ ಒಂದು ಆಯುಧ- ಸತೀಶ್ ಜಾರಕಿಹೊಳಿ ಅದನ್ನು ಚೆನ್ನಾಗಿ ಉಪಯೋಗಿಸುತ್ತಾರೆ!”
ಈ ಚುನಾವಣೆಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಪರ ನಿಂತಿದ್ದೇವೆ – ಅದೇ ನಮ್ಮ ನಿಲುವು.”
ಎಂದು ಸತೀಶ ಜಾರಕುಹೊಳಿ ಹೇಳಿದರು
ಬ್ಯುರೋ ರಿಪೋರ್ಟ್ ಬೆಳಗಾವಿ.