ಹುಣಸೂರು : ಕಂದಾಯ ಇಲಾಖೆಯ ಅಧಿಕಾರಿ ಜಿ.ಎಸ್.ಮಂಜುನಾಥ್ ಹೃದಯಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 50 ವರ್ಷ ವಯಸ್ಸಾಗಿತ್ತು. ತಾಲೂಕಿನ ಶ್ಯಾನ್ ಭೋಗನಹಳ್ಳಿ ಗ್ರಾಮದ ಸಾರಿಗೆ ಸಂಸ್ಥೆಯ ನಿವೃತ್ತ ಮೇಲ್ಚಾರಕರಾದ ಗೋವಿಂದೇಗೌಡರ ಪುತ್ರರಾದ ಇವರು ಭಾನುವಾರ ಹೃದಯಘಾತಕ್ಕೆ ಒಳಗಾಗಿದ್ದರು. ಇವರನ್ನು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಕೊನೆಯುಸಿರೆಳಿದಿದ್ದಾರೆ.
ಇವರು ಹುಣಸೂರು ತಾಲೂಕಿನಲ್ಲಿ ಹಲವಾರು ವರುಷ ತಾಲೂಕು ಸರ್ವೇಯರ್ ಆಗಿ ಸೇವೆ ಸಲ್ಲಿಸಿದ್ದರು.
ಇತ್ತೀಚೆಗೆ ಸೂಪ್ರವೈಜರ್ ಆಗಿ ಬಡ್ತಿ ಪಡೆದು ಶ್ರೀರಂಗಪಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದೊಂದಿಗೆ ಮೈಸೂರಿನಲ್ಲಿ ವಾಸವಿದ್ದರು. ಅವರಿಗೆ ಪತ್ನಿ ಪವಿತ್ರ, ಓರ್ವ ಪುತ್ರಿ ಸಿಂಚನ, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮತ್ತು ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತರ ಅಂತ್ಯಕ್ರಿಯೆ ಅವರ ಸ್ವಾಗ್ರಾಮದ ತೋಟದಲ್ಲಿಮಂಗಳವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.