Sunday, March 1, 2026
Google search engine

Homeರಾಜ್ಯಸುದ್ದಿಜಾಲಭತ್ತ-ರಾಗಿ ಹುಲ್ಲಿನ ಮೆದೆ ಸುಟ್ಟು ಭಸ್ಮ

ಭತ್ತ-ರಾಗಿ ಹುಲ್ಲಿನ ಮೆದೆ ಸುಟ್ಟು ಭಸ್ಮ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಭತ್ತದ ಹುಲ್ಲಿನ ಮತ್ತು ರಾಗಿ ಹುಲ್ಲಿನ ಮೆದೆ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಣಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಮಲಮ್ಮ ಕುಮಾರ್ ಎಂಬುವರಿಗೆ ಸೇರಿದ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಇದರಿಂದ 2 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಹುಲ್ಲಿನ ಮೇದೆಗೆ ಬೆಂಕಿ ಬಿದ್ದ ತಕ್ಷಣವೇ ಗ್ರಾಮಸ್ಥರು ಮತ್ತು ಅಗ್ನಿ ಶಾಮಕ ದಳ ಬೆಂಕಿ ಆರಿಸುವ ಪ್ರಯತ್ನ ಮಾಡಿದರು ಕೂಡ ಯಾವುದೇ ಪ್ರಯೋಜನ‌ವಾಗಿಲ್ಲ.

ಪರಿಹಾರ ನೀಡಿ : ಬೆಂಕಿ ಆಕಸ್ಮಿಕವಾಗಿ ಭತ್ತದ ಹುಲ್ಲಿನ ಮೆದೆ ಮತ್ತು ರಾಗಿ ಹುಲ್ಲಿನ ಮೇದೆ ಸುಟ್ಟು ಕಮಲಮ್ಮ ಕುಮಾರ್ ಅವರಿಗೆ ಅಪಾರ ನಷ್ಟವಾಗಿದ್ದು ಇವರಿಗೆ ತಾಲೂಕು ಆಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular