Saturday, May 2, 2026
Google search engine

HomeUncategorizedರಾಷ್ಟ್ರೀಯಆರ್‌ ಬಿ ಐ ಉಪ ಗವರ್ನರ್‌ ಆಗಿ ರೋಹಿತ್ ಜೈನ್ ನೇಮಕ

ಆರ್‌ ಬಿ ಐ ಉಪ ಗವರ್ನರ್‌ ಆಗಿ ರೋಹಿತ್ ಜೈನ್ ನೇಮಕ

ನವದೆಹಲಿ : ಕೇಂದ್ರ ಸರ್ಕಾರವು ರೋಹಿತ್ ಜೈನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ಉಪ ಗವರ್ನರ್ ಆಗಿ 3 ವರ್ಷಗಳ ಅವಧಿಗೆ ನೇಮಕ ಮಾಡಿದೆ. ಅವರ ನೇಮಕಾತಿಯನ್ನು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅನುಮೋದಿಸಿದೆ. ಅವರು ಮೇ 3ರಂದು ಅಥವಾ ನಂತರ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಆರ್​ಬಿಐ ಉಪ ಗವರ್ನರ್ ಆಗಿದ್ದ ಟಿ. ರವಿಶಂಕರ್ ಅವರ ಅಧಿಕಾರಾವಧಿ ಮುಗಿದಿದೆ. ಹೀಗಾಗಿ, ಅವರ ಸ್ಥಾನವನ್ನು ರೋಹಿತ್ ಜೈನ್ ವಹಿಸಿಕೊಳ್ಳಲಿದ್ದಾರೆ.

ರೋಹಿತ್ ಜೈನ್ ಸುಮಾರು ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಅವರು ರಿಸರ್ವ್ ಬ್ಯಾಂಕಿನಲ್ಲಿ ಮೇಲ್ವಿಚಾರಣೆ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ರೋಹಿತ್ ಜೈನ್ ಅವರನ್ನು ಡಿಸೆಂಬರ್ 2020ರಲ್ಲಿ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಯಿತು. ರೋಹಿತ್ ಜೈನ್ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.

RELATED ARTICLES
- Advertisment -
Google search engine

Most Popular