ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ನಿರಂತರ ತುಂತುರು ಮಳೆಯಾಗುತ್ತಿದ್ದು, ಮನೆಗಳು ಸೋರಲಾರಂಭಿಸಿವೆ. ಈ ಕಾರಣದಿಂದಾಗಿ ಜನರು ಮನೆಗಳ ಮೇಲೆ ತಾಡಪಾಲ ಹೊದಿಸುತ್ತಿದ್ದಾರೆ.
ಬಾಗಲಕೋಟೆಯ ನವನಗರದ ವಾಂಬೆ ಕಾಲೋನಿಯಲ್ಲಿ ನಿರಂತರ ಮಳೆಗೆ ಶೆಡ್’ಗಳು, ಹಂಚಿನ ಮನೆಗಳು, ಸ್ಲ್ಯಾಪ್ ಮನೆಗಳು, ಮಣ್ಣಿನ ಮನೆಗಳು ಸೋರಲಾರಂಬಿಸಿದ್ದು, ತಾಡಪಾಲ ಹೊದಿಸುತ್ತಿರುವ ದೃಶ್ಯ ಕಂಡುಬಂದಿದೆ.
ಬಾಗಲಕೋಟೆಯಲ್ಲಿ ಮುಂದುವರೆದ ಮಳೆರಾಯನ ಅಬ್ಬರ ಮುಂದುವರೆದಿದ್ದು, ಳೆರಾಯನ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.