ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗ ಬಲಿದಾನವನ್ನು ನಾವೆಲ್ಲರೂ ಸ್ಮರಿಸಿ ಅವರನ್ನು ಗೌರವಿಸಬೇಕಿದೆ ಎಂದು ರೋಟರಿ ವಲಯ 6 ರ ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ ತಿಳಿಸಿದರು.
ಪಟ್ಟಣದ ರೋಟರಿ ಮಿಡ್ ಟೌನ್ ಕಚೇರಿಯಲ್ಲಿ ರೋಟರಿ ಮಿಡ್ ಟೌನ್ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಸವ ದಿನ ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ತಾಲೂಕಿನ ನಾಲ್ಕು ನಿವೃತ್ತ ಸೈನಿಕರನ್ನು ಸನ್ಮಾನಿಸಿ ಬಳಿಕ ಅವರು ಮಾತನಾಡಿರು, ನಾವೆಲ್ಲರೂ ನೆಮ್ಮದಿಯಿಂದ ಜೀವಿಸಲು ದೇಶದ ಗಡಿ ಭಾಗದಲ್ಲಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸಿ ಶತ್ರು ರಾಷ್ಟ್ರಗಳಿಂದ ನಮ್ಮೆಲ್ಲರನ್ನು ರಕ್ಷಿಸುತ್ತಿರುವ ಸೈನಿಕರ ಪಾತ್ರ ಸ್ಮರಣೀಯವಾದದ್ದು, ಕಾರ್ಗಿಲ್ ಯುದ್ಧದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಸೋಲಿಸಲು ಹುತಾತ್ಮರಾದ ಸೈನಿಕರಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕಿದೆ ಎಂದರು.
ರೋಟರಿ ಮಿಡ್ ಟೌನ್ ಅಧ್ಯಕ್ಷ ಜಗನ್ ಗೌಡ ಮಾತನಾಡಿ ಕಾರ್ಗಿಲ್ ವಿಜಯೋತ್ಸವ ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಪ್ರತೀಕವಾಗಿದೆ, ಇಂದಿನ ಯುವ ಪೀಳಿಗೆ ಹುತಾತ್ಮ ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸಿ ನಾವೆಲ್ಲರೂ ಸೈನಿಕರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಸೈನಿಕರಾದ ಗಣೇಶ್, ರಮೇಶ್, ಲೋಕೇಶ್, ಮತ್ತು ವೆಂಕಟೇಶ್ ಅವರು ತಮ್ಮ ಸೇವಾ ಅವಧಿಯಲ್ಲಿನ ಅನುಭವ ಹಂಚಿಕೊಂಡರು, ಈ ಸಂದರ್ಭ ರೋಟರಿ ಸಂಸ್ಥೆ ಕಾರ್ಯದರ್ಶಿ ಚೇತನ್, ಖಜಾಂಚಿ ಐಕೆಪಿ ಹೆಗಡೆ, ಹಿರಿಯ ಸದಸ್ಯರಾದ ಸತ್ಯನಾರಾಯಣ್, ವಿನಯ್ ಶೇಖರ್, ನಾಗರಾಜ್, ಚಂದ್ರು, ರವಿಶಂಕರ್, ಗುರುದತ್, ಅಂಬಲಾರೆ ಬಸವೇಗೌಡ, ಎಂ.ಎಂ ರಾಜೇಗೌಡ, ಹರೀಶ್, ಎಂ.ಪಿ ರಾಜು, ಸ್ವಾಮಿ, ದೇವರಾಜ್, ರಾಮಚಂದ್ರ, ಕೃಷ್ಣೆಗೌಡ, ಸುರೇಶ್, ಮಹದೇವ್, ಲಕ್ಷ್ಮಣ್, ಸಣ್ಣೇಗೌಡ ಮತ್ತಿತರಿದ್ದರು.