ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಬೈಲಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಮಿಡ್ ಟೌನ್ ವತಿಯಿಂದ ಇಂಟರಾಕ್ಟ್ ಕ್ಲಬ್ ಪ್ರಾರಂಭಿಸಲಾಯಿತು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಟರಾಕ್ಟ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಕೀರ್ತನಾ ಹಾಗೂ ಕಾರ್ಯದರ್ಶಿ ಉರ್ಮೈನ್ ಅವರಿಗೆ ಪದಗ್ರಹಣ ಅಧಿಕಾರಿ ರೋಟರಿ ವಲಯ 6 ರ ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ ಅಧಿಕಾರ ಹಸ್ತಾಂತರಿಸಿ ಮಾತನಾಡಿ ಶಿಕ್ಷಣದ ಜೊತೆ ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಮುಂದಾಗುವ ನಿಟ್ಟಿನಲ್ಲಿ ಇಂಟರಾಕ್ಟ್ ಕ್ಲಬ್ ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ರೋಟರಿ ಮಿಡ್ ಟೌನ್ ಯೂತ್ ಸರ್ವಿಸ್ ಡೈರೆಕ್ಟರ್ ಗುರುದತ್ ಮಾತನಾಡಿ ವಿದ್ಯಾರ್ಥಿ ಜೀವನದಿಂದ ನಾಯಕತ್ವ ಗುಣ ಮೈಗೂಡಿಸಿಕೊಳ್ಳುವ ಉದ್ದೇಶ ಹಾಗೂ ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ರೋಟರಿ ಸಂಸ್ಥೆಯಿಂದ ಪ್ರೌಢಶಾಲೆಗಳಲ್ಲಿ ಇಂಟರಾಕ್ಟ್ ಕ್ಲಬ್ ಪ್ರಾರಂಬಿಸಲಾಗುತ್ತಿದೆ ಎಂದರು.

ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ ಅಧ್ಯಕ್ಷ ಜಗನ್ ಗೌಡ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರೆಗೌಡ ಮಾತನಾಡಿ ಸಮಾಜದ ಅಭಿವೃದ್ಧಿಗೆ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಯಾಗಿ ರೋಟರಿ ಪಾತ್ರ ಬಹಳ ಪ್ರಮುಖವಾಗಿದೆ ಇವರ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಕಾರ್ಯದರ್ಶಿ ಚೇತನ್, ಸದಸ್ಯರಾದ ಅಂಬಲಾರೆ ಬಸವೇಗೌಡ, ಸುನಿಲ್ ಗೌಡ, ಹೇಮೇಶ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.