Sunday, May 25, 2025
Google search engine

Homeಅಪರಾಧರೌಡಿ ಚೈಲ್ಡ್ ರವಿ ಹತ್ಯೆ ಪ್ರಕರಣ: ನಾಲ್ವರ ಬಂಧನ

ರೌಡಿ ಚೈಲ್ಡ್ ರವಿ ಹತ್ಯೆ ಪ್ರಕರಣ: ನಾಲ್ವರ ಬಂಧನ

ಹಾಸನ: ನಟೋರಿಯಸ್ ರೌಡಿಶೀಟರ್ ಚೈಲ್ಡ್ ರವಿಯನ್ನು ಇತ್ತೀಚೆಗೆ ನಾಲ್ವರು ಬರ್ಬರವಾಗಿ ಕೊಲೆ ಮಾಡಿದ್ದರು. ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊನೆಗೂ ಹಂತಕರನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ಮಾರನೇ ದಿನ ನೀರು ತರಲೆಂದು ಹೋಗಿದ್ದ ಚೈಲ್ದ್ ರವಿ ಆಲಿಯಾಸ್ ರವಿಕುಮಾರ್ ನನ್ನು ಕಾರಿನಲ್ಲಿ ಬಂದ 4 ಮಂದಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು.

ಕೊಲೆ ಆರೋಪಿಗಳನ್ನು ಕೊನೆಗೂ ಹಾಸನ ಹೊರವಲಯದ ಗ್ಯಾರಳ್ಳಿ ಬಳಿ ಅರೆಸ್ಟ್ ಮಾಡಲಾಗಿದೆ.

ಪ್ರೀತಮ್ (27), ಕೀರ್ತಿ(26), ರಂಗನಾಥ್ ಅಲಿಯಾಸ್ ರಂಗ(26) ಹಾಗೂ ಅಮಿತ್ ಆಲಿಯಾಸ್ ಅಮ್ಮಿ (31) ಬಂಧಿತ ಆರೋಪಿಗಳು.

ಏನಿದು ಪ್ರಕರಣ?

ಇದೇ ಜೂನ್ 5ರ ಮುಂಜಾನೆ 7 ಗಂಟೆ 50 ನಿಮಿಷಕ್ಕೆ ರೌಡಿ ಶೀಟರ್ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೃತ ರೌಡಿಶೀಟರ್ ಎರಡು ಕೊಲೆ ಸೇರಿ ಏಳು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಇತ್ತ ಈಗಾಗಲೇ ಮೂರು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಪ್ರೀತಮ್ ಹಾಗೂ ರವಿ ನಡುವೆ ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ಪೈಟ್ ಶುರುವಾಗಿತ್ತು. ಇದೇ ವಿಚಾರಕ್ಕೆ ರವಿ ಕೊಂದರೆ ತಾನೇ ಡಾನ್ ಆಗುತ್ತೇನೆ ಎಂದು ಪ್ರೀತಮ್ ಹೇಳಿಕೊಂಡಿದ್ದ. ಅದರಂತೆ ಆತನನ್ನು ಕೊಲೆ ಮಾಡಲು ಸ್ಕೇಚ್ ಹಾಕಿ ತನ್ನ ಸಹಚರರೊಂದಿಗೆ ಜೂ.5ರಂದು ಬೆಳ್ಳಂ ಬೆಳಗ್ಗೆ ಬಂದು ಚೈಲ್ಡ್​​​​ ರವಿಯನ್ನು ಹತ್ಯೆಮಾಡಿದ್ದರು.

ಪೆನ್ಷನ್ ಮೊಹೊಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೊನೆಗೂ ಹತ್ಯೆ ನಡೆಸಿದ ಆ ನಾಲ್ವರು ಹಂತಕರನ್ನು ಕೊಲೆಯಾದ ಒಂದೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಪೊಲೀಸರು.

RELATED ARTICLES
- Advertisment -
Google search engine

Most Popular