ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ಪದವು ಪಶ್ಚಿಮ ವಾರ್ಡಿನ ಶ್ರೀ ಕೃಷ್ಣ ಭಜನಾ ಮಂದಿರ ಟ್ರಸ್ಟ್ (ರಿ.) ತಿಂಪೈ ಕಾಲೋನಿ, ಕಾನಡ್ಕ ಶಕ್ತಿನಗರ ಬಳಿ 10 ಲಕ್ಷದ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಇಲ್ಲಿನ ಕೃಷ್ಣ ಭಜನಾ ಮಂದಿರವು ಹಲವಾರು ವರ್ಷಗಳಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಪರಿಸರದಲ್ಲಿ ಅಭಿವೃದ್ಧಿಯಾಗಬೇಕು ಎಂಬ ಹಲವರ ಮನವಿ ಮೇರೆಗೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಮುಗಿಯುವ ಭರವಸೆಯಿದೆ ಎಂದರು.
ಪಾಲಿಕೆಯ ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ವನಿತಾ ಪ್ರಸಾದ್, ಶಕೀಲಾ ಖಾವಾ, ವಿ.ಎಚ್.ಪಿ ಮುಖಂಡರಾದ ಎಚ್.ಕೆ.ಪುರುಷೋತ್ತಮ್, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಕುಶಾಲ್ ಕುಮಾರ್ ಪ್ರಮುಖರಾದ ರವಿಚಂದ್ರ, ಸುಂದರ್ ಅಂಚನ್, ವಿನೋದ್ ಮುಗ್ರೋಡಿ, ಶುಭಕರ, ಅವಿನಾಶ್ ಅಂಚನ್, ಕೇಶವ, ಡಾ.ಚಂದ್ರಶೇಖರ, ಅಶೋಕ್ ನಾಯಕ್, ಪ್ರಸಾದ್ ಶಕ್ತಿನಗರ, ಗಣೇಶ್, ವಿಜಯ್ ಶೆಣೈ, ಕಿಶನ್, ಶಿವಪ್ಪಣ್ಣ, ಅಮೃತ ಟೀಚರ್, ಲತಾ, ಮೊದಲಾದವರು ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



