Saturday, May 2, 2026
Google search engine

Homeಸ್ಥಳೀಯಎಸ್.ಎಂ.ಕೃಷ್ಣ ಹಾಗೂ ಹೆಚ್.ಕೆ ವೀರಣ್ಣಗೌಡ ಒಂದೊಂದು ವಿಶ್ವವಿದ್ಯಾನಿಲಯವಿದ್ದಂತೆ : ಸಂಸದ ಜಿ ಕುಮಾರ್ ನಾಯಕ್ ಬಣ್ಣನೆ

ಎಸ್.ಎಂ.ಕೃಷ್ಣ ಹಾಗೂ ಹೆಚ್.ಕೆ ವೀರಣ್ಣಗೌಡ ಒಂದೊಂದು ವಿಶ್ವವಿದ್ಯಾನಿಲಯವಿದ್ದಂತೆ : ಸಂಸದ ಜಿ ಕುಮಾರ್ ನಾಯಕ್ ಬಣ್ಣನೆ

ಮದ್ದೂರು : ಎಂ.ಹೆಚ್. ಚನ್ನೇಗೌಡ ವಿದ್ಯಾನಿಲಯ ಮದ್ದೂರು ವತಿಯಿಂದ, ಗುರುಸೇವಾ ಧುರೀಣ, ಕೀರ್ತಿಶೇಷ, ಶ್ರೀ ಎಚ್.ಕೆ ವೀರಣ್ಣಗೌಡರ ಮತ್ತು ಡಾ.ಎಸ್.ಎಂ ಕೃಷ್ಣ ಅವರ ಜನ್ಮ ಜಯಂತಿ ಕಾರ್ಯಕ್ರಮವನ್ನು, ಎಚ್.ಕೆ ವೀರಣ್ಣಗೌಡ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ್ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಎಂದರೆ ಅಕ್ಷರದಲ್ಲಿ ದೂರವಿದ್ದ ಕಾಲದಲ್ಲೇ ಪತ್ರಿಕೆಯನ್ನು ಪ್ರಾರಂಭಿಸಿದ ವೀರಣ್ಣಗೌಡರು ಹಾಗೂ ರಾಜಕೀಯವಾಗಿ ಎಲ್ಲಾ ಸ್ಥರಗಳಲ್ಲೂ ತಮ್ಮದೇ ಆದ ಚಾಪನ್ನು ಮೂಡಿಸಿದ್ದ ಎಸ್ .ಎಂ.ಕೃಷ್ಣರವರದು ಬಹಳ ಅಪರೂಪದ ಮೇರು ವ್ಯಕ್ತಿತ್ವ. ಎಸ್.ಎಂ.ಕೃಷ್ಣ ಹಾಗೂ ಹೆಚ್.ಕೆ ವೀರಣ್ಣಗೌಡ ಇಬ್ಬರು ಸಹ ಒಂದೊಂದು ವಿಶ್ವವಿದ್ಯಾನಿಲಯವಿದ್ದಂತೆ. ಮಂಡ್ಯ ಕಾವೇರಿಯ ಮಡಿಲು. ಒಕ್ಕಲಿಗರ ಹೃದಯ ಭಾಗ. ಆಲೆಮನೆ ಕಬ್ಬಿನ ಮನೆಯ ನೆಲೆಬೀಡು ಎಂಬಂತಿದ್ದ ಮಂಡ್ಯ ಜಿಲ್ಲೆ ಇಂದು ಪುಸ್ತಕದ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಜ್ಞಾನದ ಕಣಜ ಎಂಬುದನ್ನು ರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸಿದೆ ಎಂದು ಹೇಳುತ್ತಾ, ಪುಸ್ತಕದ ಮನೆ ಅಂಕೇಗೌಡರ ಕಾರ್ಯವನ್ನ ಶ್ಲಾಘಿಸಿದರು.
ಅಲ್ಲದೆ ಎಂ.ಹೆಚ್. ಚನ್ನೇಗೌಡ ವಿದ್ಯಾನಿಲಯವು ತನ್ನ ಹಿರಿಯ ವಿದ್ಯಾರ್ಥಿಗಳನ್ನು ಹಾಗೂ ಬಸವಣ್ಣನವರ ಹಾದಿಯಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಸಹ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಅಲ್ಲದೆ ಈ ಎಲ್ಲಾ ಅಭಿನಂದಿತರು ಒಂದೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮಾಡಿದ್ದು ಇಂದಿನ ವಿದ್ಯಾರ್ಥಿಗಳಾದ ತಾವು ಅವರ ಹಾದಿಯಲ್ಲಿ ನಡೆದು ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿಶ್ಚಲಾನಂದನಾಥ ಮಹಾ ಸ್ವಾಮೀಜಿಗಳು, ಎಸ್.ಎಂ ಕೃಷ್ಣ ಹಾಗೂ ಎಚ್.ಕೆ ವೀರಣ್ಣಗೌಡರು ರಾಜಕೀಯವಾಗಿ ಮದ್ದೂರಿನಲ್ಲಿ ಗುರುತರವಾದ ಕಾರ್ಯಗಳನ್ನು ಮಾಡಿದ್ದು ವೈಯಕ್ತಿಕವಾಗಿ ಇಬ್ಬರೂ ಸಹ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ. ಎಸ್.ಎಂ.ಕೃಷ್ಣರವರ ಯೋಜನೆಗಳು, ಅವರ ಆಲೋಚನೆಗಳು ಬಹಳ ವಿಭಿನ್ನ ಹಾಗೂ ವಿಶೇಷವಾದವು. ಅಧಿಕಾರಿಗಳನ್ನು ಹೇಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದನ್ನು ಎಸ್.ಎಂ ಕೃಷ್ಣ ರವರನ್ನು ನೋಡಿ ಕಲಿಯಬೇಕು. ಅವರು ತಮ್ಮ ಎಲ್ಲಾ ಕಾರ್ಯಗಳಿಗೂ ಸಹ ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ಬೆಂಗಳೂರನ್ನು ಸಿಂಗಾಪುರ್ ಮಾಡಲು ಹೊರಟ ಆಧುನಿಕತೆ ಯೋಜನೆಗಳ ಹರಿಕಾರ. ತಮ್ಮ ಕಾಲಾವಧಿಯಲ್ಲಿ ಅವರು ಅಲಂಕರಿಸದೆ ಇರುವ ಹುದ್ದೆಗಳೆ ಇಲ್ಲ ಎಂದು ಸೇವಕರುಗಳನ್ನು ಸ್ಮರಿಸಿದರು.
ನೀತಿ ನಿರೂಪಣೆ ಮಾಡುವಲ್ಲಿ, ರಾಜ್ಯದ ಬಡತನ ನಿರ್ಮೂಲನೆಗೆ ಹಾಗೂ ಶಿಕ್ಷಣದ ಕ್ರಾಂತಿಗೆ ಮಾದರಿಯಾಗಿರುವ ಶ್ರೀ ಕುಮಾರ್ ನಾಯಕ್ ರವರು ನಡೆದು ನಡೆದು ಬಂದ ಹಾದಿ ಶ್ಲಾಘನೀಯ ಎಂದು ಪ್ರಶಂಶಿಸಿದರು. ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಹಾಗೂ ತಮ್ಮ ಸೇವ ಕಾರ್ಯದ ಮೂಲಕ ಇತರರಿಗೆ ಮಾದರಿಯಾಗಿರುವ ಶ್ರೀ ಅಂಕೇಗೌಡರನ್ನು ಗುರುತಿಸಿ ಸ್ಮರಿಸಬೇಕಾದದ್ದು ಜಿಲ್ಲೆಯ ಜನತೆಯ ಕರ್ತವ್ಯ ಎಂದು ತಿಳಿಸಿದರು. ಕೆಲಸಕ್ಕೂ ಸೇವೆಗೂ ಅಪಾರ ವ್ಯತ್ಯಾಸವಿದೆ ನಾವು ಪ್ರತಿಫಲಕ್ಕಾಗಿ ಮಾಡುವುದು ಕೆಲಸ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವನ್ನು ಸೇವೆ ಎಂದು ಕರೆಯುತ್ತಾರೆ. ನಾವು ಮಾಡುವ ಕೆಲಸದಲ್ಲಿ ಸೇವಾ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕು ಹಾಗೂ ಅಂತ ಸೇವಾ ಕೆಲಸಗಳಲ್ಲಿ ಸಾಧಿಸಿದವರನ್ನು ಗುರುತಿಸಿ ಬೆಳೆಸುವ ವಿಶಾಲ ಹೃದಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ತಮ್ಮ ಆಶೀರ್ವಚನದ ಮೂಲಕ ತಿಳಿಸಿದರು.

ಎಸ್.ಎಂ. ಕೃಷ್ಣ ಹಾಗೂ ಎಚ್.ಕೆ ವೀರಣ್ಣಗೌಡರಿಗೆ ನುಡಿನಮನವನ್ನು ಸಲ್ಲಿಸಿ ಮಾತನಾಡಿದ, ಪ್ರೊ. ಜಯಪ್ರಕಾಶ್ ಗೌಡರು, ಎಚ್.ಕೆ ವೀರಣ್ಣಗೌಡರು ಶಿವಪುರ ಧ್ವಜ ಸತ್ಯಾಗ್ರಹಸ ಚಳುವಳಿ ಮೂಲಕ ಇಡೀ ಭರತ ಖಂಡದಲ್ಲೇ ಕಾಲ್ನಡಿಗೆಯಲ್ಲಿ ಬಹಳ ದೊಡ್ಡ ಮಟ್ಟದ ಚಳುವಳಿಯನ್ನು ಮಾಡಿದ ಕೀರ್ತಿ ವೀರಣ್ಣ ಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ರಾಜಕೀಯ ಕ್ಷೇತ್ರದಲ್ಲಿ ಎಲ್ಲಾ ಹಂತಗಳನ್ನು ಅಲಂಕರಿಸಿ, ಎಲ್ಲಾ ಪ್ರಪ್ರಥಮಗಳನ್ನು ಕೊಟ್ಟಿದ್ದು ಮದ್ದೂರು. ಒಂದು ವೇಳೆ ವೀರಣ್ಣಗೌಡರು, ಬದುಕು ಮೆಲುಕು ಪುಸ್ತಕವನ್ನು ಹೊರತರದಿದ್ದರೆ ಇಂದು ನಮಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾತಂತ್ರ ಹೋರಾಟಗಾರರ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತಿರಲಿಲ್ಲ.
ಅಲ್ಲದೆ ಎಸ್.ಎಂ ಕೃಷ್ಣರವರಿಗೆ ದೇಶದ ಪ್ರಧಾನಿಯಾಗುವ ಎಲ್ಲಾ ಅವಕಾಶಗಳು, ಅರ್ಹತೆಗಳು ಇದ್ದರೂ ಸಹ ಕೆಲವು ರಾಜಕೀಯ ಇಚ್ಛಾಶಕ್ತಿಗಳ ಕಾರಣದಿಂದಾಗಿ ಅವರು ಆ ಹುದ್ದೆಗೆ ಏರಲಾಗಲಿಲ್ಲ ಎಂಬುದು ವಿಷಾಧಕರ. ಆದರೂ ಸಹ ವೈಯಕ್ತಿಕವಾಗಿ ಈ ಇಬ್ಬರೂ ಸಹ ತಮ್ಮ ಸೇವಾ ಕಾರ್ಯಗಳ ಮೂಲಕ ಜನಮಾನಸದಲ್ಲಿ ಇಂದಿಗೂ ಸಹಾ ಅಚ್ಚಳಿಯದೆ ಉಳಿದಿದ್ದಾರೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಎಚ್. ಕೆ ವೀರಣ್ಣಗೌಡ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಪದ್ಮಶ್ರೀ ಎಂ. ಅಂಕೇಗೌಡ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಅಂಕೇಗೌಡ ಇವರನ್ನು ಸಂಸ್ಥೆಯ ವತಿಯಿಂದ, ಅಭಿನಂದಿಸಿ ಗೌರವಿಸಲಾಯಿತು.
ಅಲ್ಲದೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿ ವರ್ಗದವರನ್ನು, ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದರ್ಶ್ ಮರಿಯಪ್ಪ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಗಳ ಗೌರವ ಅಧ್ಯಕ್ಷರಾದ ಕೆ.ಟಿ ಚಂದು, ಅಧ್ಯಕ್ಷರಾದ ಸ್ವರೂಪ್ ಚಂದ್, ಕಾರ್ಯದರ್ಶಿಗಳಾದ ಸಿ.ಅಪೂರ್ವ ಚಂದ್ರ, ಖಜಾಂಚಿ ಶಿವರಾಮು ಹಾಗೂ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ಹಲವು ಸಂಘ-ಸಂಸ್ಥೆಗಳ ಸದಸ್ಯರುಗಳು, ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular