ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಇಂದಿನ ರಾಜಕೀಯ ನೇತಾರರಿಗೆ ಸಾಮಾಜಿಕ ಕಾರ್ಯಕ್ರಮಗಳು ಒಂದು ಆದರ್ಶವಾಗಿ ಉಳಿದಿವೆ ಎಂದು ಚುಂಚನಕಟ್ಟೆ ಹೋಬಳಿ ಸಾ.ರಾ.ಸ್ನೇಹ ಬಳಗದ ಅಧ್ಯಕ್ಷ ದಮ್ಮನಹಳ್ಳಿ ಧರ್ಮ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಏಮ್ ಫಾರ್ ಸೇವಾ ಸೇವಾ ಸಂಸ್ಥೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ರವರ ಹುಟ್ಟು ಹಬ್ಬದ ಅಂಗವಾಗಿ ವಸತಿ ನಿಲಯದ ಮಕ್ಕಳಿಗೆ ದಿನಸಿ ಸಾಮಾನುಗಳನ್ನು ವಿತರಿಸಿ ಮಾತನಾಡಿದ ಅವರು ಕೆ. ಆರ್. ನಗರ ಕ್ಷೇತ್ರದಲ್ಲಿ ಶಾಸಕರಾಗಿ ಸಚಿವರಾಗಿ ಸಾರಾ ಮಹೇಶ್ ರವರು ಮಾಡಿರುವ ಜನಪರ ಕಾರ್ಯಗಳು ಅಭಿವೃದ್ಧಿ ಯೋಜನೆಗಳು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿದ್ದು ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಸ್ಥಾನಮಾನ ದೊರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಕಗ್ಗಳ ಈರಣ್ಣ, ನಾಡಪ್ಪನಹಳ್ಳಿ ಮಹದೇವು, ಬೆಣಗನಹಳ್ಳಿ ದೀಪು, ರೈಸ್ ಮಿಲ್ ಸಂತೋಷ್, ಭಾಸ್ಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.