ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್‌ನಗರ : ಸಾಲಿಗ್ರಾಮ ತಾಲೂಕಿನ ಸಾಲೇಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತರಾದ ಎಸ್.ಅರ್.ಮೋಹನ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸುಂದರ ಆಯ್ಕೆಯಾದರು.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಮೋಹನ್ ಕುಮಾರ್, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುಂದರ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಕೆ.ಆರ್.ನಗರ ಸಹಕಾರ ಇಲಾಖೆ ಸಿಡಿಪಿ ಎಸ್.ರವಿ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನಂತರ ಮಾತನಾಡಿದ ನೂತನ ಎಸ್.ಅರ್.ಮೋಹನ್ ಕುಮಾರ್ ಮಾತನಾಡಿ ತಮ್ಮ ಅವಧಿಯಲ್ಲಿ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಲು ಶಾಸಕ ಡಿ.ರವಿಶಂಕರ್ ಅವರ ಸಹಕಾರ ದಿಂದ ಶ್ರಮಿಸುವುದಾಗಿ ತಿಳಿಸಿದರು.
ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರಾದ ಎಸ್.ಪಿ.ಜಗದೀಶ್, ಅಂಗಡಿ ಕುಮಾರ್, ನಿಂಗೇಗೌಡ,ಮಧು,ರಾಜೇಗೌಡ, ವೀರಭದ್ರ, ಮಂಜುನಾಥ್, ಪುಕ್ಕಟ್ಟೆ ಭರತ್,ಪ್ರಜ್ವಲ್.ಕಿರಣ್,ಸುರೇಶ್,ಹರೀಶ್,ಶಿವಣ್ಣ ಸೇರಿದಂತೆ ಮತ್ತಿತರರು ನೂತನ ಅಧ್ಯಕ್ಷ -ಉಪಾಧ್ಯಕ್ಷರನ್ನು ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಅಶ್ವತ್ ಕುಮಾರ್, ಎಸ್.ಎಂ.ಮೋಹನ್ ಕುಮಾರ್, ಎಸ್.ಎಲ್.ಗೀತಾಶಿವಣ್ಣ, ಎಸ್.ಜಿ.ಆಶಾಗೋಪಾಲಸ್ವಾಮಿ, ಎಸ್.ಎ.ಪ್ರಕಾಶ್, ಸಂಘದ ಕಾರ್ಯದರ್ಶಿ ಎಸ್.ಜಿ.ವೆಂಕಟೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.



