ಮೈಸೂರು : ಸಫಾರಿ ಓಪನ್ ಗೆ ಹೆಚ್ಚಿದ ಒತ್ತಡ, ಸರ್ಕಾರದ ಮಟ್ಟದಲ್ಲಿ ಚರ್ಚೆಗೀಡಾಗುತ್ತಿದೆ. ಒಂದು ಕಡೆ ಸಫಾರಿ ಆರಂಭ ಮಾಡುವಂತೆ ರೆಸಾರ್ಟ್ ಮಾಲೀಕರು, ವಾಹನ ಚಾಲಕರು, ವ್ಯಾಪಾರಸ್ಥರು ಹಾಗೂ ಟ್ರಾವೆಲ್ಸ್ ಅಸೋಸಿಯೇಷನ್ ಒತ್ತಾಯಿಸಿದ್ದರೆ, ಮತ್ತೊಂದು ಕಡೆ ರೈತ ಸಂಘಟನೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಮಾನವ ಹಾಗೂ ಪ್ರಾಣಿ ಸಂಘರ್ಷ ಹಿನ್ನೆಲೆ ಸರ್ಕಾರ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿಯನ್ನ ಬಂದ್ ಮಾಡಲಾಗಿತ್ತು. ಆದರೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಉಂಟಾಗಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಕೂಡಾ ಮತ್ತೆ ಸಫಾರಿ ಆರಂಭಕ್ಕೆ ಒಲವು ತೋರಿದ್ದಾರೆ.
ಅಲ್ಲದೇ ಇಯರ್ ಎಂಡ್ ಆಗಿರೋದ್ರಿಂದ ಸಫಾರಿ ಆರಂಭಕ್ಕೆ ಮೈಸೂರು ಹೋಟೆಲ್ ಮಾಲೀಕರು, ಸಂಘ ಸಂಸ್ಥೆಗಳ ಒತ್ತಡ ಹೇರಿದ್ದಾರೆ. ಈ ವೇಳೆ ದೇಶ ವಿದೇಶದಿಂದ ಮೈಸೂರಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ವೇಳೆ ಸಫಾರಿ ಬಂದ್ ಮಾಡಿದ್ರೆ, ಪ್ರವಾಸೋದ್ಯಮಕ್ಕೆ ಸಾಕಷ್ಟು ಹೊಡೆತ ಉಂಟಾಗುತ್ತೆ. ಮತ್ತೆ, ಸಫಾರಿ ಬಂದ್ ಮಾಡಿರೋದ್ರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಸಫಾರಿ ಪ್ರವಾಸೋದ್ಯಮದ ಒಂದು ಭಾಗವಾಗಿದ್ದು, ಪ್ರವಾಸೋದ್ಯಮಕ್ಕೆ ಮರು ಜೀವ ನೀಡಲು, ಸರ್ಕಾರ ಕೂಡಲೇ ಸಫಾರಿ ಪುನರಾರಂಭ ಮಾಡಬೇಕು ಎಂದು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ.
ಇನ್ನೂ ಮಾನವ ಪ್ರಾಣಿ ಸಂಘರ್ಷ ನಿರಂತರವಾಗಿ ಇರುತ್ತದೆ. ಸಫಾರಿಯಿಂದ ಪ್ರಾಣಿಗಳು ಆಚೆ ಬರ್ತಿವೆ ಅನ್ನೋದು ಸುಳ್ಳು. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದರೇ ಸಾವಿನ ಪ್ರಕರಣಗಳು ನಮ್ಮಲ್ಲಿ ಕಡಿಮೆ ಇದೆ. ಅಲ್ಲದೇ ಸಫಾರಿ ಬಂದ್ ನಿಂದಾಗಿ ರೆಸಾರ್ಟ್ ಮಾಲೀಕರು, ವಾಹನ ಚಾಲಕರು, ವ್ಯಾಪಾರಸ್ಥರು, ಟ್ರಾವೆಲ್ಸ್ ಅಸೋಸಿಯೇಷನ್ ಹೋಟೆಲ್ ಉದ್ಯಮಕ್ಕೂ ತೊಂದರೆ ಆಗುತ್ತಿದೆ. ಹಾಗಾಗಿ ಸರ್ಕಾರ ಕೂಡಲೇ ಸಫಾರಿ ಪುನರಾರಂಭ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ.



