ಬೆಂಗಳೂರು : ವೇತನ ಪರಿಷ್ಕರಣೆ 4 ವರ್ಷಗಳಿಗೊಮ್ಮೆ ಆಗಬೇಕು ಅಂತಿದೆ. 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ. ಆದ್ರೆ ನೌಕರರು 4 ವರ್ಷಗಳ ಹಿಂಬಾಕಿ ಕೇಳುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ವೇತನ ಪರಿಷ್ಕರಣೆ 4 ವರ್ಷಕ್ಕೊಮ್ಮೆ ಆಗಬೇಕು ಅಂತಿದೆ. 2016 ರಲ್ಲಿ ನಮ್ಮ ಸರ್ಕಾರವೇ ಪರಿಷ್ಕರಣೆ ಮಾಡಿತ್ತು, 2020ರಲ್ಲಿ ಮಾಡಲಿಲ್ಲ. 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ. ಆದರೆ ನೌಕರರು ನಾಲ್ಕು ವರ್ಷದ ಬಾಕಿ ಕೇಳುತ್ತಿದ್ದಾರೆ. ಶ್ರೀನಿವಾಸ ಮೂರ್ತಿ ಕಮಿಟಿ 38 ತಿಂಗಳಿನ ಪರಿಷ್ಕರಣೆ ಪರಿಶೀಲಿಸಬಹುದು ಎಂದಿದ್ದು, 2023ರ ಪರಿಷ್ಕರಣೆ ಆದೇಶದಂತೆ ನೀಡಬೇಕು ಅಂದಿದೆ. ಹಾಗಾಗಿ ಆದೇಶದಲ್ಲೇ ಗೊಂದಲ ಇದೆ ಎಂದು ತಿಳಿಸಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಉಳಿದ ಮೂರು ನಿಗಮಗಳಲ್ಲಿ 50% ಬಸ್‌ಗಳ ಸಂಚಾರ ಆಗುತ್ತಿದೆ. ಕೆಎಸ್‌ಆರ್‌ಟಿಸಿ ಸಂಚಾರವೂ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಅಲ್ಲೂ 50% ಬಸ್ಸುಗಳು ಸಂಚರಿಸುತ್ತಿವೆ. ವಿಚಾರ ಕೋರ್ಟ್‌ನಲ್ಲಿ ಇದೆ ನಾವು ಕೋರ್ಟ್ ತೀರ್ಪು ಕಾಯುತ್ತಿದ್ದೇವೆ. ನಿನ್ನೆ ನ್ಯಾಯಾಲಯ ಒಂದು ದಿನ ಮುಷ್ಕರ ಮುಂದೂಡಿಕೆ ಮಾಡಲು ಹೇಳಿತ್ತು. ಆದರೂ ಇಂದು ಮುಷ್ಕರ ಮಾಡಿದ್ದಾರೆ ಅದನ್ನ ಕೋರ್ಟ್ ಗಮನಿಸುತ್ತದೆ ಎಂದಿದ್ದಾರೆ.