ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ : ಸಾಲಿಗ್ರಾಮ ತಾಲೂಕಿನ ಚನ್ನಂಗರೆ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ವೈ.ಅಭಿಲಾಷ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ವೈ.ಅಭಿಲಾಷ್ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಕೆ.ಅರ್.ನಗರ ಸಹಕಾರ ಇಲಾಖೆಯ ಸಿ.ಡಿ.ಓ ಎಸ್.ರವಿ ಅವರು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಹಾಲಿ ಅಧ್ಯಕ್ಷರಾಗಿದ್ದ ವೈ.ಎಸ್.ನಟರಾಜು ಅವರ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು ಚುನಾವಣೆಗೆ ಸಂಘದ ಸಿ.ಇ.ಓ ಆರ್.ಮಂಜುನಾಥ್ ಸಹಕಾರ ನೀಡಿದರು
ಚುನಾವಣಾ ಸಭೆಯಲ್ಲಿ ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್ ಸಂಘದ ಉಪಾಧ್ಯಕ್ಷ ಶಂಕರನಾಯಕ, ನಿರ್ದೇಶಕರಾದ ಉಷಾಸಂಜಯ್,ಸಿ.ಎಚ್. ಕುಮಾರ್, ಚೆಲುವಯ್ಯ,ತಮ್ಮೇಗೌಡ, ಪುಟ್ಟೇಗೌಡ, ಸಿ.ಕೆ.ಮಲ್ಲಿಕಾರ್ಜುನ, ಸೈಯದ್ ಇಸ್ರಾರ್ ಇದ್ದರು
ನಂತರ ನೂತನ ಅಧ್ಯಕ್ಷ ಸಿ.ವೈ.ಅಭಿಲಾಷ್ ಮಾತನಾಡಿ ಸಂಘಕ್ಕೆ ಹೊಸ ಷೇರುದಾರ ಸಂಖ್ಯೆಯನ್ನು ಹೆಚ್ಚಿಸುವುದು ಅಲ್ಲದೇ ರೈತರಿಗೆ ಅಗತ್ಯವಾಗಿ ರಸಗೊಬ್ಬರ ಮತ್ತು ಭತ್ತದ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳುವುದರ ಜತಗೆ ಸಕಾಲದಲ್ಲಿ ಸಾಲ ವಿತರಣೆಗೆ ಒತ್ತು ನೀಡುವುದಾಗಿ ತಿಳಿಸಿದರು
ಅಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ಹನಸೋಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಎಚ್.ಟಿ.ರಾಜೇಶ್, ಚನ್ನಂಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ನಾರಾಯಣ್ ಗೌಡ, ಕಾಂತರಾಜು, ಸದಸ್ಯೆ ರಾಜೇಶ್ವರಿಲೋಕೇಶ್, ಮುಖಂಡರಾದ ಬಾಪು, ಬೋರೇಗೌಡ, ಪ್ರಕಾಶ್, ಅರವಿಂದ, ಪುಟ್ಟರಾಜ, ಜಗಣ್ಣ,ಲೋಹಿತ್ ಸೇರಿದಂತೆ ಮತ್ತಿತರರು ಅಭಿಲಾಷ್ ಅವರನ್ನು ಅಭಿನಂಧಿಸಿದರು