Monday, August 25, 2025
Google search engine

Homeಸಿನಿಮಾಸ್ಯಾಂಡಲ್ ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ನಿಧನ

ಸ್ಯಾಂಡಲ್ ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ನಿಧನ

ಮಂಗಳೂರು : ಕೆಜಿಎಫ್ ಚಿತ್ರದ ಮೂಲಕ ಪ್ರಸಿದ್ದಿಯಾಗಿದ್ದ ಹಿರಿಯ ನಟ ದಿನೇಶ್ ಮಂಗಳೂರು ಅವರು ನಿಧನ ಹೊಂದಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಸಂಭವಿಸಿದೆ.

ಕಳೆದ ಕೆಲವು ದಿನಗಳಿಂದ ಆನಾರೋಗ್ಯಕ್ಕೆ ತುತ್ತಾಗಿದ್ದ ದಿನೇಶ್‌, ಉಡುಪಿಯ ಕುಂದಾಪುರದ  ಇಂದು ಬೆಳಗಿನ ಜಾವ ಸರ್ಜನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ

ಕಳೆದ ತಿಂಗಳು ಸನಿಮಾ ಶೂಟಿಂಗ್ ವೇಳೆ ಪಾರ್ಶ್ವವಾಯುಗೆ ತುತ್ತಾಗಿದ್ದ ದಿನೇಶ್ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಆನಂತರ ದಿನೇಶ್ ಕುಂದಾಪುರದಲ್ಲಿ ನೆಲೆಸಿದ್ದರು. ಆದರೆ ಮತ್ತೆ ಕಳೆದ ವಾರ ಪುನಃ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕುಂದಾಪುರದ ಕೋಟೇಶ್ವರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಿಸಿದೆ ಇಂದು ಸರ್ಜನ್ ಆಸ್ಪತ್ರೆಯಲ್ಲಿ ದಿನೇಶ್ ಮಂಗಳೂರು ಮೃತಪಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ದಿನೇಶ್ ಮಂಗಳೂರು ಅವರು, ಈ ಹಿಂದೆ ರಿಕ್ಕಿ, ಕಿರಿಕ್ ಪಾರ್ಟಿ, ಉಳಿದವರು ಕಂಡಂತೆ, ಕೆಜಿಎಫ್ ಸೇರಿದಂತೆ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದರು.

1970ರಲ್ಲಿ ಬಿಡುಗಡೆಯಾದ ಆಸ್ಪೋಟ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದ ದಿನೇಶ್ ಮಂಗಳೂರು ಹಲವು ಕನ್ನಡ ಚಿತ್ರಗಳಲ್ಲಿ ಪೋಷಕ ನಟರಾಗಿ ಗಮನ ಸೆಳೆದಿದ್ದರು

ದಿನೇಶ್ ಅವರ ಸಾವಿನ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಸಂತಾಪ ಸೂಚಿಸಿದೆ

RELATED ARTICLES
- Advertisment -
Google search engine

Most Popular