Friday, April 3, 2026
Google search engine

Homeಸ್ಥಳೀಯಭಾಷಣದ ಬಳಿಕ ಕುಸಿದು ಬಿದ್ದ ಸಂತೋಷ್ ಹೆಗ್ಡೆ : ಆಸ್ಪತ್ರೆಗೆ ದಾಖಲು

ಭಾಷಣದ ಬಳಿಕ ಕುಸಿದು ಬಿದ್ದ ಸಂತೋಷ್ ಹೆಗ್ಡೆ : ಆಸ್ಪತ್ರೆಗೆ ದಾಖಲು

ಬೆಂಗಳೂರು : ಕಾರ್ಯಕ್ರಮವೊಂದರಲ್ಲಿ ಭಾಷಣ ಮುಗಿಸಿ ಕುಳಿತುಕೊಳ್ಳವ ವೇಳೆ ದಿಢೀರ್ ಕುಸಿದು ಬಿದ್ದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಸ್ವಸ್ಥರಾಗಿದ್ದು,  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಭಾಗವಹಿಸಿದ್ದರು. ಈ ಮಧ್ಯೆ ಭಾಷಣ ಮುಗಿಸಿ ಕುಳಿತು ಕೊಳ್ಳುವ ವೇಳೆ ಸಂತೋಷ್ ಹೆಗ್ಡೆ ದಿಢೀರ್ ಕುಸಿದು ಬಿದ್ದು ಅಸ್ವಸ್ಥರಾದರು.

ತಕ್ಷಣವೇ ಸ್ಪೀಕರ್  ಯು.ಟಿ. ಖಾದರ್  ಅವರ ಕಾರಿನಲ್ಲಿ ಸಂತೋಷ್ ಹೆಗಡೆ ಅವರನ್ನು ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಣಿಪಾಲ್ ಆಸ್ಪತ್ರೆಗೆ ಸಂತೋಷ್ ಹೆಗ್ಡೆ ಅವರನ್ನ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES
- Advertisment -
Google search engine

Most Popular