Wednesday, May 21, 2025
Google search engine

Homeಸ್ಥಳೀಯಯುವಪೀಳಿಗೆ ಜನಪದ ಉಳಿಸಿ: ಹರೀಶ್‌ಗೌಡ

ಯುವಪೀಳಿಗೆ ಜನಪದ ಉಳಿಸಿ: ಹರೀಶ್‌ಗೌಡ


ಮೈಸೂರು:ಜನಪದರುಜೀವನದ ಸಾರವನ್ನು ಸೋಬಾನೆ, ಗೀಗಿಪದ, ಜಾನಪದಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಆದ್ದರಂದಜಾನಪದಕ್ಕೆ ಒಳ್ಳೆಯ ಆಧ್ಯತೆಇರುವುದರಿಂದಯುವ ಪೀಳಿಗೆ ಜನಪದವನ್ನು ಉಳಿಸಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಕಳಕಳಿ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನಕಾಲೇಜು ಮತ್ತುರಾಜ್ಯ ಮತ್ತುಜಿಲ್ಲಾಕನ್ನಡಜಾನಪದ ಪರಿ?ತ್ ವತಿಯಿಂದಕಾಲೇಜಿನಆವರಣದಲ್ಲಿ ನಡೆದ ಮಹಾರಾಣಿ ದೇಸಿ ಸಂಭ್ರಮಕ್ಕೆಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದಅವರು, ಭಾರತದ ಸಂಸ್ಕೃತಿಯನ್ನು ವಿದೇಶಿಗರು ಕಲಿಯುತ್ತಿರುವುದು ಸಂತಸದ ವಿಚಾರವಾಗಿದ್ದು, ನಮ್ಮ ನೆಲದ ಸಂಸ್ಕಾರ ಬಿಡಬಾರದು.
ನಮ್ಮ ಸಂಸ್ಕೃತಿ ಉಳಿಸಬೇಕು. ಮಹಾರಾಣಿಕಾಲೇಜಿಗೆಕರ್ನಾಟಕದೆಲ್ಲೆಡೆಉತ್ತಮ ಹೆಸರಿದೆ. ಪ್ರಸ್ತುತ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ರಾಜ್ಯದಉನ್ನತ ಅಧಿಕಾರಿಗಳಾಗಿ ಎಂದು ತಿಳಿಸಿದರು.
ಕಾಲೇಜಿನಲ್ಲಿ ಪ್ರಸ್ತುತ ೩೫೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ೨೫೦ಕ್ಕೂ ಹೆಚ್ಚು ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾಲೇಜಿನ ಸಮಸ್ಯೆಗಳ ಬಗ್ಗೆ ಸಿಎಂ, ಜಿಲ್ಲಾಉಸ್ತುವಾರಿ ಸಚಿವರಜತೆ ಚರ್ಚಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತೇನೆ. ೧೦ ತಿಂಗಳಿನಲ್ಲಿ ನೆಲಕ್ಕುರಿಳಿದ ಕಾಲೇಜಿನಕಟ್ಟಡದ ಮರು ನಿರ್ಮಾಣಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ. ಕಾಲೇಜಿನ ಹೆಚ್ಚಿನಅಭಿವೃದ್ಧಿಗೆಜಿಲ್ಲೆಯವರೇಆದ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರು ಸ್ಪಂದಿಸುವ ಭರವಸೆಯಿದೆಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇದೇಕಾಲೇಜಿನಲ್ಲಿ ಸ್ನಾತಕ್ಕೋತ್ತರ ತರಗತಿಗಳು ಪ್ರಾರಂಭವಾಗಲಿವೆ. ಆದರೆ, ಆದ? ವಿದ್ಯಾರ್ಥಿಗಳು ಮಾನಸಗಂಗೋತ್ರಿಯಲ್ಲಿಯೇ ಪಿಜಿ ಪದವಿ ಪಡೆಯಿರಿ. ಈ ಕಾಲೇಜಿಗೆ ಹೆಚ್ಚುವರಿಯಾಗಿಇನ್ನೊಂದು ವಿದ್ಯಾರ್ಥಿ ನಿಲಯದಅವಶ್ಯಕತೆಇರುವುದನ್ನು ಮನಗಂಡಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಆಗಲೆಂದುಕಾಲೇಜಿನಆವರಣದಲ್ಲೇ ವಸತಿ ನಿಲಯ ಸ್ಥಾಪಿಸಲು ಉದ್ದೇಶಿಸಿದ್ದೇನೆ. ವಿದ್ಯಾರ್ಥಿಗಳು ಮನಸ್ಸನ್ನು ಚಂಚಲ ಸ್ಥಿತಿಗೆ ಬಿಡದೆ ಮುಂದಿನ ೫ ವ?ಗಳ ಕಾಲ ಕ?ಪಟ್ಟುಓದಿದರೆ ಮುಂದಿನ ದಿನಮಾನಗಳಲ್ಲಿ ಮಹಾರಾಣಿಕಾಲೇಜಿನ ವಿದ್ಯಾರ್ಥಿಗಳು ಮಹಾರಾಣಿಯಂತೆಯೇ ಬದುಕಬಹುದುಎಂದು ಕಿವಿ ಮಾತು ಹೇಳಿದರು.
ಜಾನಪದಕಲಾವಿದರರಾದ ಕಂಸಾಳೆ ಕುಮಾರಸ್ವಾಮಿ, ಸೋಬಾನೆ ಕಲಾವಿದೆ ಸಣ್ಞಮ್ಮ, ರಾಣಿ, ಯರಗನಹಳ್ಳಿ ರಾದಮ್ಮ, ಮಾದಮ್ಮ, ಎಸ್.ಬಾಲಾಜಿ, ಬೆಸೂರು ಮೋಹನ್‌ಕುಮಾರ್‌ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಡಿ.ರವಿ, ರವಿಗೌಡ, ಅಂಶಿಪ್ರಸನ್ನ ಕುಮಾರ್, ವಿಭಾಗೀಯ ಸಂಚಾಲಕ ಕಾವೇರಿ ಪ್ರಕಾಶ, ರಾಣಿ ಪ್ರಭಾ, ಅಂತರಕಾಲೇಜುವ ಸ್ಪರ್ಧೆಗಳ ತೀರ್ಪುಗಾರಅಮ್ಮರಾಮಚಂದ್ರ, ಕನ್ನಡ ಪ್ರಾಧ್ಯಾಪಕ ಡಾ.ಎಚ್.ಜೆ.ಭೀಮೇಶ್, ಪಿ.ಆರ್.ಸೋಮೇಶ್, ವನಿತಾ, ದೀಪ, ಕೆಂಡಗಣ್ಞೆಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular