Sunday, January 4, 2026
Google search engine

Homeರಾಜ್ಯಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ತರಬೇತಿ

ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ತರಬೇತಿ

ಮಂಗಳೂರಿನ ಗಾಂಧಿನಗರ ಉರ್ವ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಾಮರಸ್ಯ ಮಂಗಳೂರು ನೇತೃತ್ವದಲ್ಲಿ ಶೋಷಿತರ ಎದೆಗಳಲ್ಲಿ ಅಕ್ಷರದ ಬೀಜ ಬಿತ್ತಿದ ಮೊಟ್ಟ ಮೊದಲ ಶಿಕ್ಷಕಿ, ಸಮಾಜ ಸುಧಾರಕಿ, ಅಕ್ಷರದಾತೆ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನ ಪ್ರಯುಕ್ತ ‘ಅಕ್ಷರದವ್ವ’ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಉದ್ಘಾಟಿಸಿದರು.
ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್ ಹಾಗೂ ದಲಿತ ಪರ ಚಳುವಳಿಯ ಮುಖಂಡರಾದ ಮೋಹನಂಗಯ್ಯ ಸ್ವಾಮಿಯವರು ಸಾವಿತ್ರಿಬಾಯಿ ಫುಲೆ ಅವರ ಕುರಿತು ಮಾಹಿತಿ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಫ್ಲೇವಿ ಫೆರ್ನಾಂಡಿಸ್ ರವರಿಗೆ ಸಾವಿತ್ರಿಬಾಯಿ ಫುಲೆ ಜನ್ಮದಿನ ಪ್ರಯುಕ್ತ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ ಭಟ್, ನ್ಯೂ ಫ್ರೆಂಡ್ಸ್ ಕಾಪಿಗುಡ್ಡೆ ಸ್ಥಾಪಕ ಅಧ್ಯಕ್ಷರಾದ ರಾಜೇಶ್ ದೇವಾಡಿಗ, ಸಾಮರಸ್ಯ ಮಂಗಳೂರು ಪದಾಧಿಕಾರಿಗಳಾದ ಟಿಸಿ ಗಣೇಶ್, ಯೋಗೀಶ್ ನಾಯಕ್, ಪೂರ್ಣಿಮಾ, ನಾಗೇಂದ್ರ ರಾವ್ , ವಿದ್ಯಾ ಶೆಣೈ, ಶಾಲೆಯ ಮುಖ್ಯೋಪಾಧ್ಯಾಯಿನಿ ಫ್ಲೆವಿ ಫೆರ್ನಾಂಡಿಸ್, ಶಿಕ್ಷಕರಾದ ಶರ್ಮಿಳಾ ಡಿಸೋಜ, ಜ್ಯೋತಿ ನಾಯಕ್ , ರಾಜೇಶ್ವರಿ ಪ್ರಭು , ನಮಿತಾ ಬಿ , ಆಶಾ, ಸುಧಾ ಬಿ , ಜೆಸಿಂತಾ ಲಾಬಿ , ಗೌರವ ಶಿಕ್ಷಕರಾದ ಶೋಬಾ, ಬೇಬಿ ಶಕುಂತಲಾ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನೀತ್ ಶರಣ್ ನಿರೂಪಿಸಿದರು. ಉಮ್ಮರ್ ಸಾಲೆತ್ತೂರು ಧನ್ಯವಾದಗೈದರು.

  • ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular