ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯು ಪರೀಕ್ಷೆ-2 ಫಲಿತಾಂಶವನ್ನು ಪ್ರಕಟಿಸಿದ್ದು ಶೇ.31.27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯದಲ್ಲಿ ಏಪ್ರಿಲ್ 24 ರಿಂದ ಮೇ 8ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆದಿತ್ತು. ದ್ವಿತೀಯ ಪಿಯು ಪರೀಕ್ಷೆ-2ರಲ್ಲಿ 1,94,077 ಮಂದಿ ಪರೀಕ್ಷೆ ಬರೆದಿದ್ದು, 60,692 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.31.27 ಮಂದಿ ಪಾಸಾಗಿದ್ದಾರೆ
ಪರೀಕ್ಷೆ ಬರೆದ ಹೊಸಬರ ಪೈಕಿ ಒಟ್ಟು 1,53,620 ಮಂದಿ ಹಾಜರಾಗಿದ್ದು, ಈ ಪೈಕಿ 54,468 ಮಂದಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಸುಧಾರಣೆ ಬಯಸಿದ ವಿದ್ಯಾರ್ಥಿಗಳಲ್ಲಿ 71,964 ಮಂದಿ ಹಾಜರಾಗಿದ್ದು, ಅವರಲ್ಲಿ 41,719 ಮಂದಿ ಅಂಕ ಹೆಚ್ಚಿಸಿಕೊಂಡಿದ್ದಾರೆ.