ಮೈಸೂರು: ಮೈಸೂರು ಹೊಸ ನ್ಯಾಯಲಯದ ಪಾರ್ಕಿಂಗ್ ದ್ವಾರದಲ್ಲಿ ಅಳವಡಿಸಿರುವ ಸುರಕ್ಷಿತ ಕನ್ನಡಿಯನ್ನು ಮೈಸೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಲೋಕಾರ್ಪಣೆಗೊಳಿಸಿದರು.
ವಕೀಲರು ಪಾರ್ಕಿಂಗ್ ಸ್ಥಳದಿಂದ ವಾಹನದಲ್ಲಿ ತೆರಳುವಾಗ ಸಮಸ್ಯೆಯಾಗುತ್ತಿದ್ದ ಹಿನ್ನೆಲೆ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕರು ಹಾಗೂ ಹಿರಿಯ ವಕೀಲರಾದ ಹೆಚ್ ಎನ್ ವೆಂಕಟೇಶ್ ಗಿರೀಶ್ ಹಾಗೂ ಜೈ ಶಂಕರ್, ಸ್ವಾಮಿ ವಕೀಲರ ಸುರಕ್ಷತೆಗಾಗಿ ಎರಡು ದ್ವಾರಗಳಲ್ಲಿ ಸುರಕ್ಷತಾ ಕನ್ನಡಿಯನ್ನು ಅಳವಡಿಸಿ ಕೊಟ್ಟಿದ್ದರು. ಈ ಸುರಕ್ಷಿತ ಕನ್ನಡಿಯನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ನಾಗರಾಜ್, ಪುಟ್ಟಸ್ವಾಮಿ ವಕೀಲರ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್, ಕಾರ್ಯದರ್ಶಿ ಸುಧೀರ್, ಉಪಾಧ್ಯಕ್ಷರಾದ ಚಂದ್ರಶೇಖರ್, ಹಿರಿಯ ವಕೀಲರು, ಮಹಿಳಾ ವಕೀಲರು, ಕಿರಿಯ ವಕೀಲರು ಹಾಜರಿದ್ದರು.
ನ್ಯಾಯಾಧೀಶರ ಹುಟ್ಟುಹಬ್ಬ
ಇದೇ ವೇಳೆ ಮೈಸೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರ ಹುಟ್ಟುಹಬ್ಬ ಹಿನ್ನೆಲೆ ಶ್ರೀಯುತರಿಗೆ ಲಾಗೈಡ್ ಬಳಗದ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು. ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಹಾರ ಹಾಕಿ ಸಿಹಿ ಲಾಡು ತಿನ್ನಿಸಿ ಶುಭ ಹಾರೈಸಲಾಯಿತು.
