Thursday, November 6, 2025
Google search engine

Homeರಾಜ್ಯಸುದ್ದಿಜಾಲಶುಭಂ ಶೇಳಕೆಯೊಂದಿಗೆ ಸೆಲ್ಫಿ : ಕೊನೆಗೂ ಸಿಪಿಐ ಕಾಲಿಮಿರ್ಚಿ ಎತ್ತಂಗಡಿ

ಶುಭಂ ಶೇಳಕೆಯೊಂದಿಗೆ ಸೆಲ್ಫಿ : ಕೊನೆಗೂ ಸಿಪಿಐ ಕಾಲಿಮಿರ್ಚಿ ಎತ್ತಂಗಡಿ

ವರದಿ :ಸ್ಟೀಫನ್ ಜೇಮ್ಸ್.

ಶುಭಂ ಶೇಳಕೆಯೊಂದಿಗೆ ಸೆಲ್ಫಿ : ಕೊನೆಗೂ ಸಿಪಿಐ ಕಾಲಿಮಿರ್ಚಿ ಎತ್ತಂಗಡಿ.

ಬೆಳಗಾವಿ: ಎಂಇಎಸ್ ಮುಖಂಡ ಶುಭಂ ಶೇಳಕೆ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿವಾದಕ್ಕೊಳಗಾಗಿದ್ದ ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಜೆ. ಎಂ. ಕಾಲಿಮಿರ್ಚಿ ಅವರನ್ನು ಸ್ಥಳ ನಿಗದಿಪಡಿಸದೇ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಸಿಇಎನ್ ಇನ್ಸಪೆಕ್ಟರ್ ಬಿ ಆರ್ ಗಡ್ಡೇಕರ ಅವರನ್ನು ವರ್ಗಾಯಿಸಿದೆ. ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಕರಾಳ ದಿನ ಮೆರವಣಿಗೆ ಆರಂಭಕ್ಕೂ ಮೊದಲು ಸಂಭಾಜಿ ಉದ್ಯಾನದಲ್ಲಿ ಶುಭಂ ಶೇಳಕೆ ಜೊತೆಗೆ ಇನ್ಸಪೆಕ್ಟರ್ ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಆ ಪೋಟೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು ಅವರ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಜೆ. ಎಂ. ಕಾಲಿಮಿರ್ಚಿ ಅವರನ್ನು ಹುದ್ದೆ ತೋರಿಸದೇ ಎತ್ತಂಗಡಿ ಮಾಡಿದೆ.

RELATED ARTICLES
- Advertisment -
Google search engine

Most Popular