Monday, November 3, 2025
Google search engine

Homeಅಪರಾಧಡ್ರಗ್ಸ್ ಮಾರಾಟ, ಜೂಜಾಟ.

ಡ್ರಗ್ಸ್ ಮಾರಾಟ, ಜೂಜಾಟ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ, ಮಾದಕ ವಸ್ತು ಮಾರಾಟ ಮತ್ತು ಜೂಜಾಟದಲ್ಲಿ ತೊಡಗಿದ್ದ ಒಟ್ಟು ಆರು ಆರೋಪಿಗಳನ್ನು ಬಂಧಿಸಿ, ಅಪಾರ ಪ್ರಮಾಣದ ಹೆರಾಯಿನ್ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 19/10/2025 ರಂದು ಪಿಎಸ್‌ಐ ಮಂಜುನಾಥ ಭಜಂತ್ರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಅಂಬಾ ಭವನ ಹೋಟೆಲ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಳಗಾವಿಯ ಉಜ್ವಲ ನಗರ ನಿವಾಸಿ ಅಪ್ಪರ ಮುನ್ನಾ ಧಾರವಾಡಕರ (26) ಮತ್ತು ಛತ್ರಪತಿ ಶಿವಾಜೀ ನಗರದ ನಿವಾಸಿ ಸಮ ಖಲೀಲ್ ಹುಬ್ಬಳ್ಳಿ (26) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಅಂದಾಜು ₹37,200/- ಮೌಲ್ಯದ 20.26 ಗ್ರಾಂ ಹೆರಾಯಿನ್, ₹2,000/- ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ ಹಾಗೂ ನಗದು ₹1,070/- ಸೇರಿ ಒಟ್ಟು ₹40,270/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮುಂಬೈನ ಸಾಯಿನ್ ಕೋಳವಾಡದ ನಿವಾಸಿ ಅಮ್ಮ @ ರಾಣಿ ಎಂ. ಎಂಬ ಮಹಿಳೆಯಿಂದ ಹೆರಾಯಿನ್ ಖರೀದಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಮೂವರ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಅದೇ ದಿನ ಪಿಎಸ್‌ಐ ರುಕ್ಕಿಣಿ ಎ. ಮತ್ತು ಸಿಬ್ಬಂದಿ ಹಾಜೀಪೀರ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿ, ಹಣ ಪಣಕ್ಕಿಟ್ಟು ಇಸ್ಪೀಟ್ ಎಲೆಗಳ ಮೂಲಕ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಛತ್ರಪತಿ ಶಿವಾಜಿ ನಗರದ ಮಂಗೇಶ ಬಾಬು ದವಳೆ, ರಾಮ ದೇವಾನಾಥ ಲಾಖೆ, ಯುವರಾಜ ಸುಂದರ ಲಾಖೆ ಮತ್ತು ಜ್ಯೋತಿ ನಗರ ಗಣೇಶಪುರದ ಅಜಯ್ ಅರ್ಜುನ ಲಾಖೆ ಎಂಬ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.


ದಾಳಿ ವೇಳೆ ಆರೋಪಿಗಳಿಂದ ನಗದು ₹1,680/- ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಎರಡೂ ಪ್ರಕರಣಗಳ ತನಿಖೆ ಮುಂದುವರೆದಿದೆ.

RELATED ARTICLES
- Advertisment -
Google search engine

Most Popular