Saturday, September 13, 2025
Google search engine

Homeಸ್ಥಳೀಯಸೆ.15 ರಿಂದ ಅ.12 : ಧ್ವನಿ ಬೆಳಕು ಕಾರ್ಯಕ್ರಮ ತಾತ್ಕಾಲಿಕ ಸ್ಥಗಿತ: ಐದು ದಿನ ಪ್ರವಾಸಿಗರಿಗೆ...

ಸೆ.15 ರಿಂದ ಅ.12 : ಧ್ವನಿ ಬೆಳಕು ಕಾರ್ಯಕ್ರಮ ತಾತ್ಕಾಲಿಕ ಸ್ಥಗಿತ: ಐದು ದಿನ ಪ್ರವಾಸಿಗರಿಗೆ ನಿರ್ಬಂಧ

ವರದಿ: ಸ್ಟೀಫನ್ ಜೇಮ್ಸ್

ಮೈಸೂರು: ಅರಮನೆಗೆ ಈ 6 ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ವಿಶ್ವ ಪ್ರಸಿದ್ಧ ಮೈಸೂರು ದಸರಾ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಮೈಸೂರು ರಾಜಮನೆತನದವರಿಂದ ಅರಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಕೆಲವು ದಿನಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.

ಸೆಪ್ಟೆಂಬರ್ 16ರಂದು ಸಿಂಹಾಸನ ಜೋಡಣೆ ಪ್ರಯುಕ್ತ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರವೇಶ ಇರುವುದಿಲ್ಲ. ಸೆಪ್ಟೆಂಬರ್ 22ರಂದು ಖಾಸಗಿ ದರ್ಬಾರ್ ಪೂಜಾ ಕಾರ್ಯದ ನಿಮಿತ್ತ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಅಕ್ಟೋಬರ್ 1ರಂದು ಆಯುಧಪೂಜೆಯ ಸಂದರ್ಭದಲ್ಲಿ ಪೂರ್ಣ ದಿನ ಪ್ರವೇಶ ಇರುವುದಿಲ್ಲ. ಅಕ್ಟೋಬರ್ 2ರಂದು ದಸರಾ ಪಾಸ್ ಅಥವಾ ಟಿಕೆಟ್ ಪಡೆದವರಿಗೆ ಮಾತ್ರ ಪ್ರವೇಶ ಅವಕಾಶವಿರುತ್ತದೆ. ಅಕ್ಟೋಬರ್ 31ರಂದು ಸಿಂಹಾಸನ ವಿಸರ್ಜನೆ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರಿಂದ 12ರವರೆಗೆ ಪ್ರವೇಶ ಇರುವುದಿಲ್ಲ.

ಇದಲ್ಲದೆ, ಸೆಪ್ಟೆಂಬರ್ 15ರಿಂದ ಅಕ್ಟೋಬರ್ 12ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅಕ್ಟೋಬರ್ 13ರಿಂದ ಸಂಜೆಗಳಲ್ಲಿ ಎಂದಿನಂತೆ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಮೈಸೂರು ಅರಮನೆ ಆಡಳಿತ ಮಂಡಳಿ ಪ್ರಕಟಿಸಿದೆ.

RELATED ARTICLES
- Advertisment -
Google search engine

Most Popular