Tuesday, January 27, 2026
Google search engine

Homeರಾಜ್ಯಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್‌ ಕೋರ್ಟ್‌ಗೆ ಇಲ್ಲ : ಹೈಕೋರ್ಟ್‌

ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್‌ ಕೋರ್ಟ್‌ಗೆ ಇಲ್ಲ : ಹೈಕೋರ್ಟ್‌

ಬೆಂಗಳೂರು : ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣಗಳಲ್ಲಿಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್‌ ಕೋರ್ಟ್‌ಗಿಲ್ಲ. ಅಂತಹ ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗೆ ಮಾತ್ರ ಇದೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

2025ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ‘ಕಿರಣ್‌ ವರ್ಸಸ್‌ ಸ್ಟೇಟ್‌ ಆಫ್‌ ಕರ್ನಾಟಕ’ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 428ರ ಪ್ರಕಾರ ಯಾವುದೇ ವಿನಾಯಿತಿ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ನೀಡಲಾಗಿದೆಯೇ ಹೊರತು ಸೆಷನ್ಸ್‌ ನ್ಯಾಯಾಲಯಗಳಿಗಲ್ಲಎಂದು ಆದೇಶಿಸಿತ್ತು. ಅದನ್ನು ಆಧರಿಸಿ ಈಗ ಹೈಕೋರ್ಟ್‌, ಸೆಷನ್ಸ್‌ ಕೋರ್ಟ್‌ಗಳಿಗೆ ಅಂತಹ ಅಧಿಕಾರ ಇಲ್ಲವೆಂದು ತೀರ್ಪು ನೀಡಿರುವುದರಿಂದ ಇನ್ನು ಮುಂದೆ ಕೇವಲ ಜೀವಾವಧಿ ಶಿಕ್ಷೆ ವಿಧಿಸಬಹುದೇ ಹೊರತು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಲಾಗದು ಎಂದು ಆದೇಶಿಸಿದೆ.

ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪಿ ಶಿವಮೊಗ್ಗದ ರುದ್ರೇಶ್‌ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತನಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪಧಿರಿಶೀಲಿಸಿದ ನ್ಯಾ.ಹೆಚ್‌.ಪಿ.ಸಂದೇಶ್‌ ಮತ್ತು ನ್ಯಾ.ಟಿ.ವೆಂಕಟೇಶ್‌ ನಾಯಕ್‌ ಅವರಿದ್ದ ವಿಭಾಗೀಯ ಪೀಠ ಇಂತಹ ತೀರ್ಪು ನೀಡಿದೆ.

ಇದರಿಂದಾಗಿ ಇನ್ನು ಮುಂದೆ ಸೆಷನ್ಸ್‌ ಕೋರ್ಟ್‌ಗಳು ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಜೀವನಪರ್ಯಂತ ಶಿಕ್ಷೆ ವಿಧಿಸಲಾಗದು. ಹೆಚ್ಚೆಂದರೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಬಹುದು. ತನ್ನ 86 ಪುಟಗಳ ತೀರ್ಪಿನಲ್ಲಿಎಲ್ಲಾಅಂಶಗಳನ್ನು ಅವಲೋಕಿಸಿರುವ ನ್ಯಾಯಾಲಯ, ಸಿಆರ್‌ಪಿಸಿ ಸೆಕ್ಷನ್‌ 428ರಡಿ ಶಿಕ್ಷೆ ವಿಧಿಸುವ ಕುರಿತು ಸುಪ್ರೀಂಕೋರ್ಟ್‌ ‘ಕಿರಣ್‌ ವರ್ಸಸ್‌ ಸ್ಟೇಟ್‌ ಆಫ್‌ ಕರ್ನಾಟಕ’ ಪ್ರಕರಣದಲ್ಲಿ ತೀರ್ಪು ಉಲ್ಲೇಖಿಸಿದೆ.

ಆರೋಪಿಗೆ ಅಧೀನ ನ್ಯಾಯಾಲಯ 2017ರ ನ.27ರಂದು ನೀಡಿದ್ದ ಜೀವನ ಪರ್ಯಂತ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್‌, ಜೀವಾವಧಿ ಶಿಕ್ಷೆಯನ್ನು ಮಾತ್ರ ವಿಧಿಸಿದೆ. ಸುಪ್ರೀಂಕೋರ್ಟ್‌ ತೀರ್ಪಿನ ಮಾನದಂಡಗಳನ್ನು ಅನ್ವಯಿಸಿದರೆ ವಿಚಾರಣಾಧೀನ ನ್ಯಾಯಾಲಯ ಅಪರಾಧಿಗೆ ಯಾವುದೇ ವಿನಾಯಿತಿ ಇಲ್ಲದೆ ಜೀವನ ಪರ್ಯಂತ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಹೈಕೋರ್ಟ್‌ ಹಸ್ತಕ್ಷೇಪ ಮಾಡಬೇಕಾಗಿದೆ. ಅದರಂತೆ ಆದೇಶ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದೆ.

RELATED ARTICLES
- Advertisment -
Google search engine

Most Popular