Sunday, January 11, 2026
Google search engine

Homeಅಪರಾಧಪ್ರಿಯಕರನ ರಕ್ಷಣೆಗೆ ಸಾವಿನಲ್ಲೂ ಮನವಿ ಮಾಡಿದ ಶಾಲಿನಿ

ಪ್ರಿಯಕರನ ರಕ್ಷಣೆಗೆ ಸಾವಿನಲ್ಲೂ ಮನವಿ ಮಾಡಿದ ಶಾಲಿನಿ

ಪಿರಿಯಾಪಟ್ಟಣ : ತಾಲ್ಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಹತ್ಯೆಯಾದ ಯುವತಿ ತನ್ನ ತಂದೆ ತಾಯಿ ಹಾಗೂ ಸಂಬಂಧಿಕರ ವಿರುದ್ಧ ಪೊಲೀಸರಿಗೆ ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ಯುವತಿಯು ನನ್ನ ತಾಯಿ ನನ್ನನ್ನು ಮಗಳು ಎಂಬುದನ್ನು ಮರೆತು ಅಸಹ್ಯವಾಗಿ ಹೊಲಸು ಪದಗಳಿಂದ ನಿಂದಿಸಿ ಜೀವನವೇ ಬೇಡ ಅನಿಸುವ ಹಾಗೆ ಮಾಡಿರುತ್ತಾರೆ. ಪಕ್ಕದ ಮನೆಯವರ ಮಾತು ಕೇಳಿ ನನ್ನ ತಂದೆಯು ನನಗೆ ನಿರಂತರ ಚಿತ್ರಹಿಂಸೆ ನೀಡುತ್ತಿದ್ದಾರೆ. ನಾನು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು ಕಾನೂನಾತ್ಮಕವಾಗಿ ನಮಗೆ ಮದುವೆಯ ವಯಸ್ಸು ಬಂದಾಗ ಮದುವೆಯಾಗುವುದರ ಬಗ್ಗೆ ನಾವು ಮನೆಯಲ್ಲಿ ಪ್ರಸ್ತಾಪ ಮಾಡಿದ ದಿನದಿಂದ ಇಲ್ಲಿಯವರೆಗೆ ನನಗೆ ನಿರಂತರ ಕಿರುಕುಳ ಉಂಟಾಗಿದೆ’ ಎಂದಿದ್ದಾಳೆ.

ಪಕ್ಕದ ಊರಿನವರಾದ ಪ್ರತಾಪ್, ಸಂಗೀತ ಮತ್ತು ಗಣೇಶ್, ತನ್ನ ಚಿಕ್ಕಪ್ಪಂದಿರಾದ ಅರುಣ, ರವಿ ಇಷ್ಟು ಮಂದಿ ನನ್ನ ಸಾವಿಗೆ ಕಾರಣ ಎಂದು ಹೇಳಿರುವ ಯುವತಿ ಪೊಲೀಸ್ ಠಾಣೆಗೆ ಇವರನ್ನು ಕರೆಯಿಸಿ ತಿಳುವಳಿಕೆ ಹೇಳಿ ಕಳುಹಿಸಿ ಎಂದು ಪತ್ರದಲ್ಲಿ ಹೇಳಿದ್ದಾಳೆ.

ಪೋಷಕರಿಂದ ಬೇಸತ್ತು ಸಾಯುವ ನಿರ್ಧಾರ ಮಾಡಿರುವಾಗಲೇ ತಂದೆ ತಾಯಿ ಕೊಲೆ ಆಕೆಯ ಮಾಡಿದ್ದಾರೆ. ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ವಯಸ್ಸಿನ ಮಗಳ ಜೀವ ತೆಗೆದಿದ್ದಾರೆ. ದ್ವಿತೀಯ ಪಿಯು ವಿದ್ಯಾರ್ಥಿನಿ ಶಾಲಿನಿ (17) ಮಂಜುನಾಥ್ ನನ್ನು ಪ್ರೀತಿಸುತ್ತಿದ್ದಳು.

ಸಾವಿನಲ್ಲಿಯೂ ಕೂಡ ತನ್ನ ಪ್ರಿಯಕರನನ್ನು ಬಿಟ್ಟುಕೊಡದೆ, ‘ಆತನಿಗೆ ಮನೆಯವರು ಯಾವುದೇ ತೊಂದರೆ ಕೊಡದಂತೆ, ಏನಾದರೂ ತೊಂದರೆ ಕೊಟ್ಟಲ್ಲಿ ತಂದೆ ತಾಯಿ ಮತ್ತು ಇತರ ಕೆಲವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾಳೆ.

RELATED ARTICLES
- Advertisment -
Google search engine

Most Popular