ಚಾಮರಾಜನಗರ : ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿ ಅಂಗವಾಗಿ ಶಂಕರ ಪುರದ ಶ್ರೀರಾಮ ಮಂದಿರದಲ್ಲಿ ಪ್ರಾತಃಕಾಲ ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನಡೆಯಿತು. ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಲಾಯಿತು .
ಶ್ರೀರಾಮ ಮಂದಿರದ ಅಧ್ಯಕ್ಷರಾದ ಪ್ರತಾಪ್, ಕಾರ್ಯದರ್ಶಿ ಸತೀಶ್, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ, ಪುರೋಹಿತ ರಾಘವನ್, ವತ್ಸಲಾ ರಾಜಗೋಪಾಲ್, ವಿಜಯಕುಮಾರ್, ಶೈಲಾನಾಗೇಂದ್ರ,ವಾಣಿಶ್ರೀ, ಉಪಸ್ಥಿತರಿದ್ದರು.



