Monday, May 26, 2025
Google search engine

Homeರಾಜ್ಯಬಿಜೆಪಿ ನಾಯಕರು ಹೇಳಿದ್ದಾರೆಂದು ಶರಣಪ್ರಕಾಶ್ ಪಾಟೀಲ್ ದೋಷಿಯಾಗಲ್ಲ: ಜಿ ಪರಮೇಶ್ವರ್

ಬಿಜೆಪಿ ನಾಯಕರು ಹೇಳಿದ್ದಾರೆಂದು ಶರಣಪ್ರಕಾಶ್ ಪಾಟೀಲ್ ದೋಷಿಯಾಗಲ್ಲ: ಜಿ ಪರಮೇಶ್ವರ್

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣಕಾಶು ದುರ್ವ್ಯವಹಾರದದಲ್ಲಿ ಇತ್ತೀಚಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೆಸರು ಕೇಳಿ ಬರುತ್ತಿರುವ ಕುರಿತು ಗೃಹ ಸಚಿವ ಜಿ ಪರಮೇಶ್ವರ್  ಪ್ರತಿಕ್ರಿಯೆ ನೀಡಿದ್ದಾರೆ.

ತನಿಖೆ ನಡೆಯುವಾಗ ಕ್ರಾಸ್ ರೆಫರೆನ್ಸ್ ಗಳು ಬರುತ್ತಿರುತ್ತವೆ, ಹಾಗೆಂದ ಮಾತ್ರಕ್ಕೆ ಅಥವಾ ಬಿಜೆಪಿ ನಾಯಕರು ಹೇಳಿದ್ದಾರೆ ಅಂತ ಶರಣಪ್ರಕಾಶ್ ಪಾಟೀಲ್ ದೋಷಿಯಾಗಲ್ಲ. ಎಸ್ಐಟಿ ತನಿಖೆ ನಡೆಸುತ್ತಿದೆ. ಎಲ್ಲಾ ಅಂಶಗಣನ್ನು ಅವರು ಪರಾಮರ್ಶೆ ಮಾಡುತ್ತಾರೆ. ಎಸ್ಐಟಿ ತನಿಖೆ ಜಾರಿಯಲ್ಲಿರುವಾಗ ಕಾಮೆಂಟ್ ಮಾಡೋದು ಸರಿಯಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿರುವುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲಾಗುತ್ತಿದೆ. ಹೈಕಮಾಂಡ್   ರಾಜ್ಯದ ನಾಯಕರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದೆ, ಅವುಗಳನ್ನು ಅನುಸರಿಲಾಗವುದು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular