ಚಾಮರಾಜನಗರ: ಕನ್ನಡ ಸಾಹಿತ್ಯ ಪ್ರಪಂಚಕ್ಕೆ ದೇವರು ಕೃತಿಯ ಮೂಲಕ ತಮ್ಮ ವಿಶಿಷ್ಟ ಹಾಗೂ ವೈಚಾರಿಕ ,ವೈಜ್ಞಾನಿಕ, ಆಧ್ಯಾತ್ಮಿಕ, ತರ್ಕ ಹಾಗು ತತ್ವ ಶಾಸ್ತ್ರಹಾಗೂ ಮೂಲ ನೆಲಗಟ್ಟಿನ ಚಿಂತನೆಗಳ ಸಾಹಿತ್ಯ ರಾಶಿಯ ಜ್ಞಾನ ಭಂಡಾರವನ್ನು ಕನ್ನಡಕ್ಕೆ ನೀಡಿದ ಶತಾಯುಷಿ ರಾಯರ ಕೊಡುಗೆ ಅನನ್ಯವೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್.ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಶತಾಯುಷಿ ಮೂರ್ತಿ ರಾವ್ ರವರ ಕೊಡುಗೆಗಳು ಕುರಿತು ಮಾತನಾಡುತ್ತಾ, ಕನ್ನಡ ಸಾಹಿತ್ಯವನ್ನು ಅತ್ಯಂತ ಶ್ರೀಮಂತ ಗೊಳಿಸಿ ಶತಾಯುಶ್ರೀಯಾಗಿ ಜ್ಞಾನ ಭಂಡಾರದ ಶಿಖರವಾಗಿ ಸಾಹಿತ್ಯವನ್ನು ರಚಿಸಿದವರು ವಿಮರ್ಶಕ ರಾಗಿ, ಬರಹಗಾರರಾಗಿ ಪ್ರಬಂಧ ಮಂಡಕರಾಗಿ ಅಧ್ಯಾಪಕರಾಗಿ ವಿವಿಧ ವೃತ್ತಿಗಳಲ್ಲಿ ಸೇವೆ ಸಲ್ಲಿಸಿ ಅಪಾರವಾದ ಅನುಭವದ ಜೀವಂತಿಕೆಯ ಪದಕನ ನಡೆಸಿ 19 20 21ನೇ ಶತಮಾನದಲ್ಲಿ ಬದುಕಿ ಬಾಳಿದ ಮೂರ್ತಿರಾಯರು ಕನ್ನಡಿಗರ ಆದರ್ಶವಾಗಿದ್ದರು ಎಂದು ತಿಳಿಸಿದರು.

ಮಂಡ್ಯ ಜಿಲ್ಲೆ ಅಕ್ಕಿ ಹೆಬ್ಬಾಳು ಗ್ರಾಮಕ್ಕೆ ಕೀರ್ತಿ ತರುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಸಲ್ಲಿಸಿ ಕನ್ನಡ ರಥವನ್ನು ನಿರಂತರವಾಗಿ ಎಳೆದು ಸೇವೆ ಸಲ್ಲಿಸಿದ ಮೂರ್ತಿರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಅಧ್ಯಕ್ಷರಾಗಿ ಗೌರವ ತಂದವರು. ಕನ್ನಡ ನಾಡು ನುಡಿ ಸಂಸ್ಕೃತಿ ವಿಚಾರ ವೈಚಾರಿಕತೆ ದೃಷ್ಟಿಕೋನ ಆಧ್ಯಾತ್ಮಿಕ ತರ್ಕ ತತ್ವ ಶಾಸ್ತ್ರಿಗಳ ಅಧ್ಯಯನಶೀಲ ಭಂಡಾರ ಹೊಂದಿದ್ದ ಮೂರ್ತಿರಾಯರ ಬದುಕೇ ಒಂದು ತೆರೆದ ಪುಸ್ತಕದಂತೆ. ವಿದ್ವಾಂಸರ ಬಗ್ಗೆ ಮಾತನಾಡುವುದೇ ಮನಸ್ಸಿಗೆ ಸಂತೋಷ ತರುವ, ಸಾಹಿತ್ಯ ಪರಿಷತ್ತಿಗೆ ಗೌರವ ತರುವ ಕ್ರಿಯೆ ಆಗಿದೆ ಎಂದರು.
ಬರಹಗಾರ ಎಸ್. ಲಕ್ಷ್ಮೀನರಸಿಂಹ ಮೂರ್ತಿರಾಯರ ದೇವರು ಕೃತಿಯ ಬಗ್ಗೆ ಮಾತನಾಡಿ, ಅವರ ಬರಹ, ಚಿಂತನೆಗಳೆ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದು ಕೊಟ್ಟಿದ್ದು, ನೂರು ವರ್ಷಗಳ ಶ್ರೇಷ್ಠ ಬದುಕನ್ನು ನಡೆಸಿ ಮಾದರಿಯಾಗಿ ಕನ್ನಡ ಸಾಹಿತ್ಯಕ್ಕೆ ಸಂಸ್ಕೃತಿಗೆ ಗೌರವ ತಂದ ಮೂರ್ತಿರಾಯರನ್ನು ನೆನೆದು ಅವರ ಕೊಡುಗೆಗಳ ಬಗ್ಗೆ ಕಾರ್ಯಕ್ರಮ ರೂಪಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯವನ್ನು ಪ್ರತಿವಾರವೂ ನಡೆಸಿಕೊಂಡು ಬರುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಸುರೇಶ್ ಗೌಡ, ಬೊಮ್ಮಾಯಿ , ಕಾರ್ ಕುಮಾರ್, ಪದ್ಮಾ ಪುರುಷೋತ್ತಮ, ಶ್ರೀಮತಿ ಕಾವೇರಿ ಮುಂತಾದವರು ಉಪಸ್ಥಿತರಿದ್ದರು.