Saturday, December 6, 2025
Google search engine

Homeರಾಜ್ಯಸುದ್ದಿಜಾಲಶಿವಗಂಗೆ ಬೆಟ್ಟದಲ್ಲಿ ಪ್ರಜ್ವಲಿಸಿದ ಶಿವದೀಪ

ಶಿವಗಂಗೆ ಬೆಟ್ಟದಲ್ಲಿ ಪ್ರಜ್ವಲಿಸಿದ ಶಿವದೀಪ

ದಾಬಸ್‌‍ಪೇಟೆ : ದಕ್ಷಿಣಕಾಶಿ ಶಿವಗಂಗೆಯ ಬೆಟ್ಟದ ಉರಿಗಂಬದಲ್ಲಿ ಶಿವ ದೀಪವನ್ನು ಹಚ್ಚಿ ವಿಶೇಷ ಆಚರಣೆಯೊಂದಿಗೆ ಗಿರಿದೀಪ ಹಬ್ಬವನ್ನು ಸಂಭ್ರಮಿಸಲಾಯಿತು. ಈ ವೇಳೆ ಮಾರ್ಗಶಿರ ಮಾಸದ ಕೃತಿಕ ನಕ್ಷತ್ರದಲ್ಲಿ ಉರಿ ಕಂಬದಲ್ಲಿ ಗಿರಿ ದೀಪವನ್ನು ಹಚ್ಚಲಾಗುತ್ತಿದ್ದು, ಅದು ಶಿವ ದೀಪ ಎಂದೇ ಪ್ರಚಲಿತವಾಗಿದೆ.

ಈ ಸಂದರ್ಭದಲ್ಲಿ ಶ್ರೀ ಹೊನ್ನಾದೇವಿ, ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲೂ ಸಹ ಪಂಚ ದೀಪಗಳನ್ನು ಹಚ್ಚಲಾಗುತ್ತದೆ. ಪಂಚ ದೀಪಗಳಾದ ತತ್ಪುರುಷಾಯ, ವಾಮದೇವ, ಅಗೋರ ವಾಯು ಮತ್ತು ರುದ್ರ ದೀಪಗಳನ್ನು ಹಚ್ಚುತ್ತಾರೆ.

ಕೃತಿಕಾ ನಕ್ಷತ್ರದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿ ಹೊನ್ನಾದೇವಿಗೆ ಕುಂಕುಮಾರ್ಚನೆ, ಶ್ರೀ ಗಂಗಾಧರ ಸ್ವಾಮಿಗೆ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿ ನಂತರ ದೇವಸ್ಥಾನದ ಮುಂಭಾಗ ದೇವರುಗಳಿಗೆ ಪೂಜೆ ಸಲ್ಲಿಸಿ ನಂತರ ಬೆಟ್ಟದ ಮೇಲಿರುವ ಉರಿಗಂಬದಲ್ಲಿ ದೊಡ್ಡದಾದ ಬಾಂಡ್ಲಿ ಇಟ್ಟು ಅಲ್ಲಿ ಎಣ್ಣೆ, ತುಪ್ಪ ತುಂಬಿ ದೀಪವನ್ನು ಹಚ್ಚುತ್ತಾರೆ. ಇದು ಮೈಸೂರು ಹಾಗೂ ಬೆಂಗಳೂರಿನವರೆಗೂ ಶಿವದೀಪ ಕಾಣುತ್ತದೆ ಎಂಬುದು ಈ ಭಾಗದ ಜನರ ನಂಬಿಕೆಗಾಗಿದೆ ಎಂದು ಹೇಳಲಾಗುತ್ತದೆ.

RELATED ARTICLES
- Advertisment -
Google search engine

Most Popular