ಬಾಲಿವುಡ್‌ನ 50 ವರ್ಷಗಳ ಕ್ಲಾಸಿಕ್ ಚಿತ್ರ ‘ಶೋಲೇ’ ೀದೇ ತಿಂಗಳ ಡಿಸೆಂಬರ್ 12 ರಂದು ಶೋಲೇ: ದ ಫೈನಲ್ ಕಟ್ ಹೆಸರಿನಲ್ಲಿ ಚಿತ್ರಮಂದಿರಗಳಲ್ಲಿ ಮತ್ತೆ ರಿಲೀಸ್ ಆಗಲಿದೆ. ಈ ಚಿತ್ರವನ್ನು ಡಾಲ್ಬಿ 5.1 ಜೊತೆಗೆ 4K ರೆಸ್ಟೋರೇಷನ್‌ನಲ್ಲಿ ಮರುಸ್ಥಾಪಿಸಲಾಗಿದ್ದು, ಸಿನಿಮಾದ ನೂತನ ಆವೃತ್ತಿಯ ಟ್ರೈಲರ್ ರಿಲೀಸ್ ಮಾಡಲಾಗಿದೆ ಎನ್ನಲಾಗಿದೆ.
ಇದೀಗ ನಿರ್ದೇಶಕ ರಮೇಶ್ ಸಿಪ್ಪಿಯವರ ಆಲೋಚನೆಯಂತೆ ಗಬ್ಬರ್ ಸಿಂಗ್‌ನ ಕೊನೆಯ ದೃಶ್ಯ ಸಂಪೂರ್ಣವಾಗಿ ಪ್ರೇಕ್ಷಕರಿಗೆ ನೋಡಲು ಸಿಗಲಿದೆ. 1975 ರಲ್ಲಿ ತುರ್ತು ಪರಿಸ್ಥಿತಿಯಿಂದಾಗಿ ಕ್ಲೈಮ್ಯಾಕ್ಸ್ ಬದಲಾಯಿಸಲಾಗಿತ್ತು. ಈಗ ಐದು ದಶಕಗಳ ನಂತರ ಮೂಲ ಕ್ಲೈಮ್ಯಾಕ್ಸ್‌ನ್ನು ಪ್ರೇಕ್ಷಕರು ನೋಡಲಿದ್ದಾರೆ ಎಂದು ತಿಳಿಸಿದ್ದಾರೆ.
ಡಿ.12 ರಂದು ದೇಶಾದ್ಯಂತ 1,500 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಫಿಲ್ಮ್ ಹೆರಿಟೇಜ್ ಫೌಂಡೇಶನ್‌ನ ಸಹಯೋಗದೊಂದಿಗೆ ಸಿಪ್ಪಿ ಫಿಲ್ಮ್ಸ್ ಈ ಚಿತ್ರದ ರೆಸ್ಟೋರೇಷನ್ ಮಾಡಿದೆ. ಈ ಚಿತ್ರದಲ್ಲಿ ರಮೇಶ್ ಸಿಪ್ಪಿ ನಿರ್ದೇಶಿಸಿ ಅವರ ತಂದೆ ಜಿ.ಪಿ. ಸಿಪ್ಪಿ ನಿರ್ಮಿಸಿದ “ಶೋಲೆ” ಚಿತ್ರದಲ್ಲಿ ಧರ್ಮೇಂದ್ರ, ಅಮಿತಾಭ್ ಬಚ್ಚನ್, ಹಿರಿಯ ನಟಿಯರಾದ ಹೇಮಾ ಮಾಲಿನಿ ಮತ್ತು ಜಯಾ ಭಾದುರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.



