Monday, December 1, 2025
Google search engine

Homeರಾಜ್ಯಸುದ್ದಿಜಾಲಶ್ರೀ ನಟರಾಜಸ್ವಾಮಿಗಳ ಕಾರ್ಯ ಪ್ರಶಂಸನೀಯ : ಸಂಸದ ಯದುವೀರ್ ಶ್ಲಾಘನೆ

ಶ್ರೀ ನಟರಾಜಸ್ವಾಮಿಗಳ ಕಾರ್ಯ ಪ್ರಶಂಸನೀಯ : ಸಂಸದ ಯದುವೀರ್ ಶ್ಲಾಘನೆ

ಹುಣಸೂರು : ತಾಲೂಕಿನ ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆ ಮತ್ತು ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇಸಿ. ನಂತರ ಗಾವಡಗೆರೆ ಗುರುಲಿಂಗ ಜಂಗಮ ಮಠಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ರಾಜ್ಯದ ಯಾವುದೋ ಮೂಲೆಯಿಂದ ಬಂದಿರುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯೆ, ಅನ್ನ, ವಸತಿ ನೀಡುವುದು ಸಾಮಾನ್ಯ ಕಲಸವಲ್ಲ. ಇಂತ ಪುಣ್ಯದ ಕೆಲಸವನ್ನು ಮಾಡುತ್ತಿರುವ ಶ್ರೀ ನಟರಾಜಸ್ವಾಮಿಗಳ ಕಾರ್ಯ ಪ್ರಶಂಸನೀಯವೆಂದು ಹಾಗೂ ಈ ಭಾಗದಲ್ಲಿ ಹಲವಾರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉಳಿವಿಗೆ ನೆರವು ನೀಡಿ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿರುವ ಸ್ವಾಮೀಜಿಗಳನ್ನು ಮೈಸೂರು ಮತ್ತು ಕೊಡುಗು ಸಂಸದ ಯದುವೀರ್ ಶ್ಲಾಘಿಸಿದರು.

ಬಳಿಕ ಮಕ್ಕಳ ಕ್ಯಾಣಕ್ಜಾಗಿ ಈ ಭಾಗದ ಭಕ್ತರ ಕಾಳಜಿಗೆ ಬೆನ್ನಲಬಾಗಿ ನಿಂತ ಶ್ರೀಗಳು ಎಲ್ಲರನ್ನು ಗೌರವಿಸುವ ಮೂಲಕ ಆಶ್ರಯ ನೀಡಿ, ಬೇಧ – ಭಾವವಿಲ್ಲದೆ ತಮ್ಮ ಮಕ್ಕಳಂತೆ ಪಾಲನೆ ಮಾಡುತ್ತಿರುವ ಅವರ ಕಾರ್ಯ ಮೆಚ್ಚುವಂತದ್ದು, ನಾಡಿನ ಹಲವು ಮಠಗಳು ನೀಡುವ ಸೇವೆ ರೀತಿಯಲ್ಲೇ. ಈ ಮಠವು ನಿಸ್ವಾರ್ಥ ಸೇವೆಯಲ್ಲಿ ತೊಡಗಿದೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಸದರನ್ನು ಶಾಲೆ ಮತ್ತು ವಿದ್ಯಾರ್ಥಿನಿಲಯ ಒಂದೇ ಕಡೆ ಇರುವುದರಿಂದ ಮತ್ತು ವಿಸ್ತೀರ್ಣ ಕೂಡ ಕಮ್ಮಿ ಇದ್ದು, ಅಟೋಪಾಠಗಳಿಗೆ ಅನಾನುಕೂಲವಾಗಿ ವಸತಿ ನಿಲಯ ಒದಗಿಸುವಂತೆ ಮನವಿ ಮಾಡಿದರು. ಮಕ್ಕಳಿಗೆ ನನ್ನ ಅನುದಾನಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.

ನಂತರ ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, ಈ ಭಾಗದಲ್ಲಿ ಶ್ರೀ ಮಠವು ಭಕ್ತರ ಆಶಯದಂತೆ ಕೆಲಸ ಮಾಡುತ್ತಿದ್ದು, ಶ್ರೀ ನಟರಾಸ್ವಾಮಿಗಳು ಕೂಡ ಎಲ್ಲರೊಳಗೆ ಒಬ್ಬರಾಗಿ ಮಠದ ಏಳಿಗೆಗೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸಿ ತಮ್ಮದೇ ಭಕ್ತವೃಂದವನ್ನು ಗಳಿಸಿದ್ದಾರೆ ಎಂದರು. ಇತ್ತೀಚಿಗೆ ಸ್ವಾರ್ಥ ನಿಲುವುಗಳು ತಮ್ಮಗೆ ಅರಿವಿಲ್ಲದಂತೆ ತಾಂಡವ ಆಡುತ್ತಿರುವ ಈ ಸಂದರ್ಭದಲ್ಲಿ ಸೌಮ್ಯ ಸ್ವಭಾವದ ಮೂಲಕ ಎಲ್ಲರನ್ನು ಸತ್ಕರಿಸಿ ಸರ್ವ ಧರ್ಮಗಳ ಸಹಬಾಳ್ವೆ, ಸಮಾನತೆಗೆ ಮುಂದಾಗಿರುವ ಶ್ರೀಗಳ ಸೇವೆ ಅನನ್ಯವಾದದ್ದು ಎಂದು ತಿಳಿಸಿದರು.

ಮಠದ ಶ್ರೀ ನಟರಾಜಸ್ವಾಮಿ ಮಾತನಾಡಿ, ಹಲವು ದಶಕಗಳಿಂದ ಭಕ್ತರ ಆಶಯದಂತೆ ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆ, ನೆಮ್ಮದಿ ಜತೆಗೆ ಸೌಹಾರ್ಧತೆಗೆ ಒತ್ತು ನೀಡಿ, ಪೂಜಾ ವಿಧಾನಗಳ ಜೊತೆಗೆ ಈ ಭಾಗದ ಭಕ್ತರು ಮತ್ತು ಜನಸಾನಾನ್ಯರಿಗೆ ಒಳಿತಾಗುವಂತೆ ನಿರಂತ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಎಲ್ಲರ ಸಹಕಾರವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಠದ ವ್ಯವಸ್ಥಾಪಕಿ ಶಿಲ್ಪ ಮಂಜುನಾಥ್, ಮಲ್ಲೇಶ್, ಉದ್ಯಮಿ ಹರವೆ ಶ್ರೀಧರ್, ನಗರಸಭೆ ಸದಸ್ಯ ಗಣೇಶ್ ಕುಮಾರ ಸ್ವಾಮಿ, ಕೂಸಪ್ಪ, ಕಲ್ಲಹಳ್ಳಿ ಶಿವಣ್ಣ, ವಕೀಲ ಮೂರ್ತಿ, ಹೆಗ್ಗಂದೂರು ಶಿವಕುಮಾರ್, ವಾಸೇಗೌಡ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular