ಮಂಡ್ಯ: ಸಿದ್ದರಾಮಯ್ಯ ಸರ್ಕಾರ ನಾಚಿಕೆಗಿಟ್ಟ ಸರ್ಕಾರ ಎಂದು ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆಯುತ್ತಿರುವ ಜೆಡಿಎಸ್-ಬಿಜೆಪಿ ಪಾದಯಾತ್ರೆ ಬಹಿರಂಗ ಸಭೆಯಲ್ಲಿ ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ಸಿದ್ದರಾಮಯ್ಯ ಸರ್ಕಾರ ದಲಿತರ ಹೆಸರಿನಿಂದ ಅಧಿಕಾರಿಕ್ಕೆ ಬಂದರು. ಮೇಕೆದಾಟು ಮಾಡುತ್ತೇವೆ ಅನ್ನುವ ಭರವಸೆಯಿಂದ ಅಧಿಕಾರಕ್ಕೆ ಬಂದು, ಇವತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ 187 ಕೋಟಿ ದುರುಪಯೋಗವಾಗಿದೆ. ಅಲ್ಲದೆ ನೂರಾರು ಕೋಟಿ ಹಗರಣ ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿ ಎಷ್ಟು ಹಗರಣ ಇದ್ದಾವೋ ಅಷ್ಟು ಹಗರಣ ಕಾಂಗ್ರೆಸ್ ನಲ್ಲಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿ ವಾಲ್ಮೀಕಿ ಹಗರಣ ಸೇರಿ ಹಲವು ಹಗರಣಗಳಿವೆ. ಮುಡಾ ಹಗರಣ ಸಿದ್ದರಾಮಯ್ಯ ಬಾಗಿಲಿಗೆ ಬಂದಿದೆ . ಸಿದ್ದರಾಮಯ್ಯ ಯಾವಾಗಲೂ ತಾವು ಸ್ವಚ್ಛ ಮುಖ್ಯಮಂತ್ರಿ ಅಂತ ಹೇಳುತ್ತಿರುತ್ತಾರೆ ಆದರೆ ದಲಿತರ ದುಡ್ಡು ಹೊಡೆದಿದ್ದಾರೆ ನಿಮಗೆ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದರು.
ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಆಗಿದೆ ಸಿಎಂ ಅವರಿಗೆ ಸ್ವಲ್ಪ ನು ಸಾಂತ್ವನ ಹೇಳಿಲ್ಲ. ಆದ್ದರಿಂದ ಸಿದ್ದರಾಮಯ್ಯ ಸರ್ಕಾರ ನಾಚಿಕೆಗಿಟ್ಟ ಸರ್ಕಾರ ಇದರಿಂದಲೇ ಗೊತ್ತಾಗುತ್ತೆ ಸಿದ್ದರಾಮಯ್ಯ ಅವರ ಸಾಚಾತನ ಹೊರಬರುತ್ತೆ. ನಿಮಗೇನಾದ್ರೂ ನಾಚಿಕೆ ಇದ್ದರೆ ರಾಜೀನಾಮೆ ಕೊಟ್ಟು ಮೊದಲು ಮನೆಗೆ ಹೋಗಿ ಎಂದು ಕಿಡಿ ಕಾರಿದರು .