ಬೆಂಗಳೂರು: ಹಿರಿಯ ಶಾಸಕ ಬಿ.ಆರ್. ಪಾಟೀಲ್ ಸಿದ್ದರಾಮಯ್ಯ ಬಗ್ಗೆ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಎಬ್ಬಿಸಿದೆ. “ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದವರು. ಅವನ ಗ್ರಹಚಾರ ಚೆನ್ನಾಗಿತ್ತು, ಅದರಿಂದಲೇ ಸಿಎಂ ಆಗಿಬಿಟ್ಟ,” ಎಂದು ಪಾಟೀಲ್ ಹೇಳಿದ್ದಾರೆ. “ಅವನಿಗೆ ಸೋನಿಯಾ ಗಾಂಧಿಯನ್ನು ಮೊದಲು ಭೇಟಿಯಾಗಿಸಿದವನು ನಾನೇ. ನನಗೆ ಗಾಡು ಇಲ್ಲ, ಫಾದರು ಇಲ್ಲ,” ಎಂಬ ಮಾತುಗಳು ಕೂಡ ವಿಡಿಯೋದಲ್ಲಿವೆ.
ಈ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಸತಿ ನಿಗಮ ಆಡಿಯೋ ವಿವಾದದ ಬಳಿಕ ಇದೀಗ ಮತ್ತೊಂದು ವಿವಾದಕ್ಕೆ ತಲೆದೊಡಗಿದ್ದಾರೆ. ಬಿಆರ್ ಪಾಟೀಲ್ ಅವರ ಸಿಎಂ ಸಿದ್ದರಾಮಯ್ಯ ಹಾಗೂ ಕೆಲ ಸಚಿವರ ವಿರುದ್ಧ ಅಸಮಾಧಾನ ಮುಂದುವರೆದಿದೆ ಎನ್ನಲಾಗಿದೆ.