Tuesday, May 20, 2025
Google search engine

Homeರಾಜ್ಯಬಿಜೆಪಿ ಸರ್ಕಾರ ರಚನೆ ಮಾಡೋವಾಗ ಶಾಸಕರನ್ನು ಕಳುಹಿಸಿದ್ದೆ ಸಿದ್ದರಾಮಯ್ಯ: ಸಚಿವ ಪ್ರಹ್ಲಾದ್ ಜೋಶಿ

ಬಿಜೆಪಿ ಸರ್ಕಾರ ರಚನೆ ಮಾಡೋವಾಗ ಶಾಸಕರನ್ನು ಕಳುಹಿಸಿದ್ದೆ ಸಿದ್ದರಾಮಯ್ಯ: ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ಬಿಜೆಪಿ ಸರ್ಕಾರ ರಚನೆ ವೇಳೆ ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯನವರೇ ಕಳುಹಿಸಿದ್ದರು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯನವರೇ ಕೆಲ ಶಾಸಕರನ್ನು ಕಳುಹಿಸಿದ್ದರು. ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ದೆವು. ಈ ಬಾರಿ ಅವರಿಗೆ ಬಹುಮತ ಇದೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಬಿಜೆಪಿ ೧೦೦ ಕೋಟಿ ನೀಡಿದ ಆಫರ್ ಬಗ್ಗೆ ದಾಖಲೆ ಇದ್ದರೆ ರವಿ ಗಾಣಿಗ ದಾಖಲೆ ಬಿಡುಗಡೆ ಮಾಡಲಿ. ವಿಷಯನ್ನು ಬೇರೆ ಕಡೆಗೆ ತಿರುಗಿಸಲು ಸುಮ್ಮನೆ ಮಾತನಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

RELATED ARTICLES
- Advertisment -
Google search engine

Most Popular