ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಇಳಿಯುವುದು ಗ್ಯಾರಂಟಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತೊಮ್ಮೆ ಭವಿಷ್ಯ ನುಡಿದರು. ಡಿಕೆ ಶಿವಕುಮಾರ್ ಅವರ “ಪ್ರಾರ್ಥನೆ ವಿಫಲವಾಗುವುದಿಲ್ಲ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅವರಿಗೆ ಸಿಎಂ ಆಸೆ ಇದೆ ಎನ್ನುವುದು ಸ್ಪಷ್ಟ,” ಎಂದರು.
“ಇಕ್ಬಾಲ್ ಹುಸೇನ್ ಅವರಂತವರು ಡಿಕೆಶಿ ಸಿಎಂ ಆಗ್ತಾರೆ ಅಂತಾ ಹೇಳ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಈ ಮಾತು ಹೇಳ್ತಿದ್ದಾರೆ. ಇದು ನಾನು ಹೇಳೋದು ಅಲ್ಲ,” ಎಂದರು.
ಡಿಕೆಶಿ ದೇವಾಲಯಗಳಿಗೆ ಹೋಗುತ್ತಿರುವುದು ವರ ಪಡೆದು ಸಿಎಂ ಆಗುವ ಕಾಲ ಸಮೀಪಿಸಿದೆ ಎನ್ನುವ ಸೂಚನೆ ಎಂದು ವ್ಯಂಗ್ಯವಾಡಿದ ಅವರು, “ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯುತ್ತಾರೆ. ಇದರಲ್ಲಿ ಅನುಮಾನವಿಲ್ಲ,” ಎಂದು ಹೇಳಿದರು.
“ಕಾಂಗ್ರೆಸ್ ಟೀಕೆ ಮಾಡುವ ಮುನ್ನ ತಮ್ಮ ಪಕ್ಷವನ್ನು ಸರಿಪಡಿಸಲಿ,” ಎಂದು ತಿರುಗೇಟು ನೀಡಿದರು.