Tuesday, May 20, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆದ ಸೀತಾ ಕಲ್ಯಾಣ ಕಾರ್ಯಕ್ರಮ

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆದ ಸೀತಾ ಕಲ್ಯಾಣ ಕಾರ್ಯಕ್ರಮ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಜ.೧೫ರಂದು ನಡೆಯುವ ಬ್ರಹ್ಮರಥೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಶ್ರೀರಾಮ ದೇವಾಲಯದಲ್ಲಿ ನಡೆದ ಸೀತಾ ಕಲ್ಯಾಣ ಕಾರ್ಯಕ್ರಮದಲ್ಲಿ ನೈಜವಾಗಿ ನಡೆಯುವ ಜನಸಾಮಾನ್ಯರ ಮದುವೆಗಳನ್ನು ನಾಚುವಂತೆ ಶಾಸ್ತ್ರೋಕ್ತವಾಗಿ ನಡೆದ
ಕಲ್ಯಾಣೋತ್ಸವ ಕಾರ್ಯಕ್ರಮ ಜರುಗಿತು.

ಸಂಜೆ ೮ರಸುಮಾರಿಗೆ ಆರಂಭಗೊoಡ ಕಾರ್ಯಕ್ರಮದಲ್ಲಿ ರಾಮದೇವರನ್ನು ಪಲ್ಲಕ್ಕಿ ಮೂಲಕ ದೇವಾಲಯವನ್ನು ಪ್ರದಕ್ಷಿಣೆ ಹಾಕಿಸಿ ಕಾಶಿಯಾತ್ರೆ ಮುಗಿಸಿ ಮಂಟಪಕ್ಕೆ ಕರೆತರಲಾಯಿತು,ನಂತರ ಹೆಣ್ಣಿನ ಕಡೆಯವರಿಂದ ವರನನ್ನು ಮನೆತುಂಬಿಸಿ ಮಂಟಪದಲ್ಲಿ ಕುಳ್ಳರಿಸಲಾಯಿತು.ದೇವಾಲಯದ ಒಳ ಆವರಣದಲ್ಲಿ
ಕಲ್ಯಾಣೋತ್ಸವ ನಡೆಸಲು ತುಂಬಾ ಕಿರಿದಾಗಿದ್ದ ಕಾರಣ ಇದೇ ಮೊದಲ ಬಾರಿಗೆ ಕಲ್ಯಾಣೋತ್ಸವವನ್ನು ದೇವಾಲಯದ ಮುಂಭಾಗ ಭವ್ಯ ಮಂಟಪದಲ್ಲಿ ನಡೆಸಿದ್ದು ನೆರೆದಿದ್ದ ಸಾರ್ವಜನಿಕರ ಭಕ್ತರ ಪ್ರಶಂಸೆಗೆ ಪಾತ್ರವಾಯಿತು.

ವಧುವರರ ಪರವಾಗಿ ಶಾಸಕ ಡಿ.ರವಿಶಂಕರ್ ಪತ್ನಿ ಸುನಿತಾ, ಕಾಂಗ್ರೆಸ್ ಹಿರಿಯ ಮುಖಂಡ ದೊಡ್ಡಸ್ವಾಮಿಗೌಡ,ತಹಶೀಲ್ದಾರ್ ನರಗುಂದ ಎಸ್.ಎನ್ ಎಸ್,ನೇತ್ರತಜ್ಞ ಕುಪ್ಪೆ ಶ್ರೀನಿವಾಸ್ ಕುಟುಂಬ ಹಾಜರಿದ್ದು ಮದುವೆ ಶಾಸ್ತ್ರಗಳನ್ನು ಚಾಚೂತಪ್ಪದೇ ನೆರವೇರಿಸಿ ಸೀತಾ ಮಾತೆಗೆ ಮಾಂಗಲ್ಯಧಾರಣೆ ಮಾಡಿಸಲಾಯಿತು ಈ ಸಂಧರ್ಭದಲ್ಲಿ ನೆರೆದಿದ್ದ ಸಾವಿರಾರು ಮಂದಿ ಜೈಶ್ರೀರಾಮ್,ಜೈಸೀತಾರಾಮ್
ಘೋಷಣೆಯನ್ನು ಮೊಳಗಿಸಿದರು.

ಮದುವೆಯಾಗದವರಿಗೆ,ಮಕ್ಕಳಾಗದವರಿಗೆ ಶುಭಫಲ ದೊರೆಯುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿoದಲೂ ಇದ್ದು ಭಾಗವಹಿಸಿದ್ದ ನೂರಾರು ಯುವಕ ಯುವತಿಯರು ಸಂಧರ್ಭಕ್ಕೆ ಸಾಕ್ಷೀಕರಿಸಿದರು.

ಕಲ್ಯಾಣೋತ್ಸವದ ವೇದಘೋಷಗಳನ್ನು ಆಗಮ ಪಂಡಿತರಾದ ಪ್ರೋಪೆಸರ್ ವೆಂಕಟೇಶಮೂರ್ತಿ ಮತ್ತು ವೇಣುಗೋಪಾಲ ನೇತೃತ್ವದ ತಂಡ ನೆರವೇರಿಸಿತು.ಭಕ್ತರಿಗೆ ಗುತ್ತಿಗೆದಾರರಾದ ಸಿ.ಬಿ ಲೋಕೇಶ ಹಾಗೂ ದೇವಾಲಯದ ವತಿಯಿಂದಲೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿಸದಸ್ಯೆ ವೀಣಾಕೀರ್ತಿ,ತಾ ಕಾಂಗ್ರೇಸ್ ಅಧ್ಯಕ್ಷ ಉದಯ್‌ಶಂಕರ್, ಗ್ರಾಪo ಸದಸ್ಯ
ಗೋವಿಂದೇಗೌಡ,ಮಾಜಿ ಸದಸ್ಯ ಮಧು,ಕುಮಾರ್, ಮುಖಂಡರಾದ ಡೈರಿಮಾಧು, ಚಿಕ್ಕಕೊಪ್ಪಲುಗಿರೀಶ್, ಶಿರಸ್ತೇದಾರ್ ಸತೀಶ್,ಉಪ ತಹಶೀಲ್ದಾರ್ ಶರತ್‌ಕುಮಾರ್, ಡಿಸಿ ಕಚೇರಿಯ ಮುಜರಾಯಿ ತಹಶೀಲ್ದಾರ್ ವಿದ್ಯುತ್‌ಲತಾ, ದೇವಾಲಯದ ಪಾರುಪತ್ತೆದಾರರಾದ ಯತಿರಾಜ್, ಪರಿಚಾರಕರಾದ ವಾಸುದೇವನ್,ನಾರಾಯಣ ಅಯ್ಯಂಗಾರ್,ಚುoಚನಕಟ್ಟೆ ಉಪ ಠಾಣೆಯ ಠಾಣಾಧಿಕಾರಿ ದೊರೆಸ್ವಾಮಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

RELATED ARTICLES
- Advertisment -
Google search engine

Most Popular