ಬೆಂಗಳೂರು : ಶಾಲೆಗಳಲ್ಲಿ ಪ್ರತಿದಿನ “ವಂದೇ ಮಾತರಂ” ಗೀತೆಯ ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡಬೇಕು ಎನ್ನುವ ಆದೇಶ ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಪಿಎಲ್‌ಐ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ. ಇಂಥದ್ದೇ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೂ ಸಲ್ಲಿಕೆಯಾಗಿತ್ತು. ಆದರೆ ಅದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದನ್ನು ಪರಿಗಣಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿದ್ದ ಪೀಠವು ನಿರಾಕರಿಸಿದೆ. ಅರ್ಜಿಯಲ್ಲಿ, ಈ ಹಿಂದೆ ವಂದೇ ಮಾತರಂನ ಆರು ಚರಣಗಳಲ್ಲಿ ಎರಡನ್ನು ಮಾತ್ರ ಹಾಡಬೇಕಿತ್ತು.
ಆದರೆ, ಕೇಂದ್ರ ಸರ್ಕಾರ ಮಾಡಿರುವ ಹೊಸ ಆದೇಶದಲ್ಲಿ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಅಂತಾ ಹೇಳಿದೆ. ಮೂರರಿಂದ ಆರನೇ ಚರಣದಲ್ಲಿ ಹಿಂದೂ ದೇವತೆಗಳ ಆರಾಧನೆಯನ್ನು ಸೇರಿಸಲಾಗಿದೆ. ಇದು ಸಂವಿಧಾನ 25, 28, 14 ವಿಧಿಗೆ ವಿರುದ್ಧವಾಗಿದೆ ಅಂತಾ ಆರೋಪಸಲಾಗಿದೆ.



