Sunday, February 8, 2026
Google search engine

Homeಅಪರಾಧಕೊಕ್ಕಡದಲ್ಲಿ ವಾಹನ ಜಾಥಾದ ವೇಳೆ ತಂಡದಿಂದ ಮೋದಿ ‌ಮೋದಿ‌ ಎಂದು ಘೋಷಣೆ

ಕೊಕ್ಕಡದಲ್ಲಿ ವಾಹನ ಜಾಥಾದ ವೇಳೆ ತಂಡದಿಂದ ಮೋದಿ ‌ಮೋದಿ‌ ಎಂದು ಘೋಷಣೆ

ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದಲ್ಲಿ ಅಖಿಲ ಭಾರತ ಮುಷ್ಕರ ಪ್ರಚಾರದ ಅಂಗವಾಗಿ ನಡೆದ ವಾಹನ ಜಾಥಾ ಕಾರ್ಯಕ್ರಮದ ವೇಳೆ ತಂಡವೊಂದು ʼಮೋದಿ ಮೋದಿʼ ಎಂಬ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ ಘಟನೆ ನಡೆದಿದೆ.
ವಾಹನ ಜಾಥಾದ ಅಂಗವಾಗಿ ಕೊಕ್ಕಡದಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಕಾರ್ಮಿಕ‌ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಿದ್ದರು.ಈ ಸಂದರ್ಭ ಏಕಾಏಕಿ ಗುಂಪೊಂದು ಸೇರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದು, ʼಮೋದಿ ಮೋದಿʼ ಎಂಬ ಘೋಷಣೆಯನ್ನು ಕೂಗುತ್ತಾ ಇದ್ದರು. ಈ ವೇಳೆ ಸಭಾ ಕಾರ್ಯಕ್ರಮ ಮುಗಿಸಿ ಜಾಥಾ ಹಿಂತಿರುಗಿದೆ.

RELATED ARTICLES
- Advertisment -
Google search engine

Most Popular