ಬೆಂಗಳೂರು: ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವಾಗ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳಡವಡಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಿ ಇದೇ ವರ್ಷದ ಫೆ.13ರಂದು ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿಯನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಆಕ್ಷೇಪಿಸಿರುವ ಅರ್ಜಿಗಳ ವಿಚಾರಣೆಯನ್ನು ಇಂದು ಮತ್ತೆ ಮುಂದುವರಿಸಿದ ಕರ್ನಾಟಕ ಹೈಕೋರ್ಟ್, ವಿಚಾರಣೆಯನ್ನು ಶುಕ್ರವಾರಕ್ಕೆ (ಜು.18) ಮುಂದೂಡಿತು.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ನಡೆದಿದ್ದು, ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು, ಹೊಸ ವಿದ್ಯುತ್ ಸಂಪರ್ಕಗಳಿಗೆ ಮಾತ್ರವೇ ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ಕಡ್ಡಾಯಗೊಳಿಸಲಾಗಿದೆ. ಯಾವುದೇ ಹೆಚ್ಚುವರಿ ದರಗಳನ್ನು ಗ್ರಾಹಕರಿಗೆ ವಿಧಿಸುವುದಿಲ್ಲ ಎಂದು ಪೀಠದ ಗಮನಕ್ಕೆ ತಂದರು.
ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಪ್ರತಿವಾದಿಸಿ, ಸ್ಮಾರ್ಟ್ ಮೀಟರ್‌ಗೆ ರಾಜಸ್ಥಾನದಲ್ಲಿ ಒಂದು ದರ ಕರ್ನಾಟಕದಲ್ಲಿ ಒಂದು ದರ ಹೇಗೆ ಎಂದು ಪ್ರಶ್ನಿಸಿದರು.
ಗ್ರಾಹಕರಿಗೆ ಹೊರೆಯಾಗಬಾರದು ಎಂಬುವುದನ್ನು ಪರಿಶೀಲಿಸುವುದು ನ್ಯಾಯಾಲಯ ಉದ್ದೇಶವಾಗಿದೆ. ಇಂದು ಸ್ವಲ್ಪ ಸ್ಪಷ್ಟತೆ ಇದ್ದಂತೆ ಕಾಣುತ್ತಿದೆ. ಲಕ್ಷ್ಮಿ ಐಯ್ಯಂಗಾರ್ ಸಂಶೋಧನೆ ಮಾಡುತ್ತಿದ್ದೀರಿ, ಮರು ವಿನ್ಯಾಸ ಮಾಡುತ್ತಿದ್ದೀರಿ ಎಂದು ಪೀಠವು ಹೇಳಿತು. ಗ್ರಾಹಕರು ಹೆಚ್ಚಿನ ದರ ಪಾವತಿ ಮಾಡುವಂತವಾಗಬಾರದು ಎಂಬುವುದು ನಮ್ಮ ಮನವಿ ಎಂದು ಜಡ್ಜ್ ಅವರ ಗಮನಕ್ಕೆ ಲಕ್ಷ್ಮಿ ಐಯ್ಯಂಗಾರ್ ಅವರು ತಂದರು. ಇನ್ನು ಶುಕ್ರವಾರಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿ ಆದೇಶಿಸಿತು.
ಈ ಹಿಂದಿನ ವಿಚಾರಣೆಯಲ್ಲಿ ಏನೇನಾಗಿತ್ತು?
ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಎಷ್ಟು ಖರ್ಚಾಗುತ್ತದೆ ಎಂಬುದರ ಬಗ್ಗೆ ನೀವು ಆತಂಕ ಯಾಕೆ ವ್ಯಕ್ತಪಡಿಸುತ್ತೀರಿ? ಗ್ರಾಹಕರಿಗೆ ಹೊರೆಯಾಗುವುದನ್ನು ಎಂಬುದನ್ನು ಮಾತ್ರ ಹೇಳಿ ಎಂದು ಪೀಠ ಪ್ರಶ್ನಿಸಿತ್ತು. ಸ್ಮಾರ್ಟ್ ಮೀಟರ್ ಅಳವಡಿಕೆಯ ಗುತ್ತಿಗೆಯನ್ನು ರಾಜಶ್ರೀ ಎಲೆಕ್ಟ್ರಿಕಲ್ಸ್ ನೀಡಲಾಗಿದೆ. ಬೆಸ್ಕಾಂನಿಂದ ರಾಜಶ್ರೀಗೆ ಹಣ ಹೋಗುತ್ತದೆ ಎಂದು ಅರ್ಜಿದಾರರ ಪರವಾಗಿ ವಕೀಲೆ ಲಕ್ಷ್ಮಿ ಐಯ್ಯಂಗಾರ್ ವಾದಿಸಿದ್ದರು.
ರಾಜಶ್ರೀಗೆ ಎಷ್ಟು ಹಣ ಹೋಗುತ್ತದೆ ಎಂಬುದು ಆತಂಕಿತತಾಗಿದ್ದಾರೆಯೇ? ಗ್ರಾಹಕರಿಗೆ ಹೆಚ್ಚು ಹೊರೆಯಾಗುತ್ತದೆಯೇ ಎಂದು ಮತ್ತೆ ಪೀಠ ಪ್ರಶ್ನಿಸಿತ್ತು. ರಾಜಶ್ರೀಗೆ ಬೆಸ್ಕಾಂ ನೀಡುವುದು ಜನರ ಹಣ ತಾನೆ? ಸ್ಮಾರ್ಟ್ ಮೀಟರ್ ತೆಗೆದುಕೊಂಡಿರದೇ ಇರುವವರೂ ಹಣ ಪಾವತಿಸಬೇಕಾಗುವುದಲ್ಲಿವೇ ಎಂದು ಲಕ್ಷ್ಮಿ ಐಯ್ಯಂಗಾರ್ ಹೇಳಿದರು. ಸ್ಮಾರ್ಟ್ ಅಲ್ಲದವರೂ ಪಾವತಿಸಬೇಕು ಎಂಬುದು ನಿಮ್ಮ ಅಳಲು ಎಂದು ಪೀಠ ಹೇಳಿತ್ತು.
ರಾಜಸ್ಥಾನ ಮತ್ತು ಗೋವಾದಲ್ಲಿ ಸ್ಮಾರ್ಟ್ ಮೀಟರ್‌ಗೆ 900 ರೂಪಾಯಿ ಪಶ್ಚಿಮ ಬಂಗಾಳ 1800 ರೂಪಾಯಿ ಇದೆ. ಟಾರಿಫ್ ಹೆಚ್ಚಿಸಬೇಕಾದರೆ ಸಮಿತಿಯ ಮುಂದೆ ಇಡಬೇಕು. ಆದರೆ, ಅದನ್ನು ಸಮಿತಿಯ ಮುಂದೆ ಇಡಲಾಗಿಲ್ಲ ಎಂದು ಎಂದು ಲಕ್ಷ್ಮಿ ಐಯ್ಯಂಗಾರ್ ವಾದಿಸಿದರು. ಅರ್ಜಿದಾರರ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಳ ಪ್ರಭುಲಿಂಗ ನಾವದಗಿ, ಸ್ಮಾರ್ಟ್ ಮೀಟರ್‌ಗಳ ಬೆಲೆ ಕುರಿತು ಪಟ್ಟಿ ಮಾಡಲಾಗಿದೆ. ಇದರಲ್ಲಿ ಎಲ್ಲಾ ರಾಜ್ಯಗಳ ವಿವರಣೆ ಇದೆ ಎಂದಿದ್ದರು.
ಮೂರು ಪಟ್ಟು ಹೆಚ್ಚಳ ದರ..
ಗುಜರಾತ್‌ನಲ್ಲಿ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ 900 ರೂಪಾಯಿದೆ. ಮಧ್ಯಪ್ರದೇಶದಲ್ಲಿ 1170, ಒಡಿಶಾದಲ್ಲಿ 5000, ಪಂಜಾಬ್‌ನಲ್ಲಿ 4770 ರೂಪಾಯಿದೆ ಎಂದು ಪೀಠ ಹೇಳಿತು.
ಕರ್ನಾಟಕದಲ್ಲಿ ಮೂರು ಪಟ್ಟು ಹೆಚ್ಚಳ ದರವಿದೆ. ಕರ್ನಾಟಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನಾವದಗಿ ಹೇಳಿದರು.
ಕರ್ನಾಟಕ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ. ರಾಜಶ್ರೀ ಎಲೆಕ್ಟ್ರಿಕಲ್ಸ್ ಯಶಸ್ವಿಯಾಗಿರುವ ಬಿಡ್‌ದಾರರು ಅವರಿಗೇಕೆ ನೀವು ಅರ್ಜಿಯ ಪ್ರತಿ ನೀಡಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಕೇಳಿದರು.
2.23 ಕೋಟಿ ವಿದ್ಯುತ್ ಸಂಪರ್ಕಗಳಿವೆ. ಸ್ಮಾರ್ಟ್ ಮೀಟರ್ ಅಳವಡಿಸುವಂತಾದರೆ ಹಾನಿ ಅಪಾರವಾಗಲಿದೆ. ಅದನ್ನು ನಾನು ಹಗರಣ ಎನ್ನುವುದಿಲ್ಲ ಎಂದು ನಾವದಗಿ ಹೇಳಿದ್ರು.
ಜನರಿಗೆ ಬಿಸಿ ತಾಗಬಾರದು ಎಂಬ ವಿಚಾರವನ್ನಷ್ಟೇ ನ್ಯಾಯಾಲಯ ನೋಡಲಿದೆ. ಸ್ಮಾರ್ಟ್ ಮೀಟರ್‌ಗೆ ವಿಧಿಸುವ ದರಕ್ಕೆ ಸಂಬಂಧಿಸಿದಂತೆ ಮಾತ್ರ ಸರ್ಕಾರದಿಂದ ಸಮರ್ಥನೆ ಬೇಕಿದೆ ಎಂದು ಅರ್ಜಿಯನ್ನು ನ್ಯಾಯಾಲಯ ಸೋಮವಾರಕ್ಕೆ ಅರ್ಜಿ ಮುಂದೂಡಲಾಗಿತ್ತು.