ಹಿರಿಯ ಉದ್ಯಮಿ, ಶಿಕ್ಷಣ ತಜ್ಞ ನಿಟ್ಟೆ ವಿನಯ್ ಹೆಗ್ಡೆ ಅವರ ನಿಧನಕ್ಕೆ ಸ್ಪೀಕರ್ ಸ್ಪೀಕರ್ ಯು.ಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.
ವಿನಯ್ ಹೆಗ್ಡೆಯವರ ಅಗಲಿಕೆಯು ಇಡೀ ರಾಜ್ಯಕ್ಕೆ ನಷ್ಟವಾಗಿದೆ. ಸಾಮಾಜಿಕ ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಅವರು ಕರಾವಳಿ ಸೌಹಾರ್ದದ ಕೊಂಡಿಯಾಗಿದ್ದರು. ಯಾವುದೇ ಜಟಿಲವಾದ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸುವ ವಿನಯ ಹೆಗ್ಡೆಯವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಸ್ಪೀಕರ್ ಸಂತಾಪ ಸೂಚಿಸಿದರು.
*ಉಸ್ತುವಾರಿ ಸಚಿವರ ಸಂತಾಪ*
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯಮ ಕ್ಷೇತ್ರಕ್ಕೆ ಭದ್ರ ಬುನಾದಿ ನಿರ್ಮಿಸುವಲ್ಲಿ ವಿನಯ್ ಹೆಗ್ಡೆ ಅವರ ಕೊಡುಗೆ ಅಪಾರ. ಹಲವಾರು ಶಾಲೆ, ಕಾಲೇಜು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಕರಾವಳಿ ಕರ್ನಾಟಕವನ್ನು ದೇಶದಲ್ಲಿ ಶಿಕ್ಷಣದ ಮಹತ್ವದ ಕೇಂದ್ರವಾಗಿಸುವಲ್ಲಿ ವಿನಯ್ ಹೆಗ್ಡೆಯವರ ಪರಿಶ್ರಮ ಅದ್ವಿತೀಯ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮತ್ತು ಅವರು ವಿಜ್ಞಾನ, ವೈದ್ಯಕೀಯ, ಸಾಮಾಜಿಕ ರಂಗಕ್ಕೆ ಕೊಡುಗೆ ನೀಡಲು ಕಾರಣೀಕರ್ತರಾಗಿದ್ದಾರೆ. ವಿನಯ್ ಹೆಗ್ಡೆಯವರ ಸೇವೆಯನ್ನು ರಾಜ್ಯ ಸದಾ ಸ್ಮರಿಸಲಿದೆ ಎಂದು ಉಸ್ತುವಾರಿ ಸಚಿವರು ಸಂತಾಪ ಸೂಚಿಸಿದ್ದಾರೆ



