Monday, August 18, 2025
Google search engine

Homeರಾಜ್ಯಸುದ್ದಿಜಾಲಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ಕೃಷ್ಣ ಕವನ ಸ್ಪರ್ಧೆ

ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ಕೃಷ್ಣ ಕವನ ಸ್ಪರ್ಧೆ

ಚಾಮರಾಜನಗರ: ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಆಗಸ್ಟ್ 31 ರಂದು ರಥದಬೀದಿಯಲ್ಲಿ ನಡೆಯಲಿರುವ 15ನೇ ವರ್ಷದ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಮೊಟ್ಟ ಮೊದಲ ಬಾರಿಗೆ ಶ್ರೀ ಕೃಷ್ಣ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಶ್ರೀ ಕೃಷ್ಣನ ಕುರಿತಾಗಿ ಸ್ವರಚಿತ ಕವನಗಳನ್ನು ರಚಿಸಲು ಅವಕಾಶವಿದ್ದು, ತಮ್ಮ ಹೆಸರುಗಳನ್ನು ಹಾಗೂ ಕವನಗಳನ್ನು ಈ ದೂರವಾಣಿ ಸಂಖ್ಯೆಗೆ ವಾಟ್ಸಾಪ್ ಮಾಡಬೇಕಾಗಿ ಕೋರಿಕೊಳ್ಳುತ್ತೇವೆ.
96117418 68. ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಗುವುದು ಎಂದು ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.

31ರ ಭಾನುವಾರ ಸಂಜೆ 3 ಗಂಟೆಗೆ ರಥದ ಬೀದಿಯಲ್ಲಿ ಜರುಗುವ ಮೊಸರು ಮಡಿಕೆ ಒಡೆಯುವ ಉತ್ಸವ ಅತ್ಯಂತ ವೈಭವದಿಂದ, ವಿಶೇಷವಾಗಿ ನಡೆಯಲಿದ್ದು ತಮ್ಮ ಮಕ್ಕಳನ್ನು ಶ್ರೀಕೃಷ್ಣ ಹಾಗೂ ರಾಧೆಯ ವೇಷಧಾರಿಗಳಾಗಿ ಆಗಮಿಸಿ 21 ಅಡಿ ಎತ್ತರದ ಮಡಿಕೆ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಪಾಲ್ಗೊಂಡು ಬೆಣ್ಣೆ ಹಾಗೂ ಮೊಸರನ್ನು ತೆಗೆಯುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಕೃಷ್ಣ ಪ್ರತಿಷ್ಠಾನ ಮನವಿ ಮಾಡಿಕೊಂಡಿದೆ.

RELATED ARTICLES
- Advertisment -
Google search engine

Most Popular