Thursday, June 26, 2025
Google search engine

Homeರಾಜ್ಯಸುದ್ದಿಜಾಲಶ್ರೀ ಕ್ಷೇತ್ರ ಧರ್ಮಸ್ಥಳದ ಮಧ್ಯವರ್ಜನೆ ಶಿಬಿರ: ಕುಡಿತದ ಚಟ ತ್ಯಜಿಸಿ ನವಜೀವನದೆಡೆಗೆ ಹೆಜ್ಜೆ ಇಡುವ ಶ್ಲಾಘನೀಯ...

ಶ್ರೀ ಕ್ಷೇತ್ರ ಧರ್ಮಸ್ಥಳದ ಮಧ್ಯವರ್ಜನೆ ಶಿಬಿರ: ಕುಡಿತದ ಚಟ ತ್ಯಜಿಸಿ ನವಜೀವನದೆಡೆಗೆ ಹೆಜ್ಜೆ ಇಡುವ ಶ್ಲಾಘನೀಯ ಉಪಕ್ರಮ- ಶರಣೆ ಜಯದೇವಿ ತಾಯಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ದಶಕಗಳಿಂದ ಮಧ್ಯವರ್ಜನ ಶಿಬಿರ ನಡೆಸಿ ಕುಡಿತದ ಚಟಕ್ಕೆ ಬಲಿಯಾದವರನ್ನು ಸರಿ ದಾರಿಗೆ ತರುತ್ತಿರುವುದು ಶ್ಲಾಘನೀಯ ಕೆಲಸ ಎಂದು ಲಾಲನಹಳ್ಳಿ ಗುರು ಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಹೇಳಿದರು.

ಕೆ.ಅರ್.ನಗರ ಪಟ್ಟಣದ ನಾಮಧಾರಿಗೌಡರ ಸಮುದಾಯ ಭವನದಲ್ಲಿ ಬುಧವಾರದಿಂದ ಆರಂಭವಾದ ಎಂಟು ದಿನಗಳ ೧೯೪೧ನೇ ಮಧ್ಯವರ್ಜನೆ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು ದುಶ್ಚಟಕ್ಕೆ ಬಲಿಯಾಗುವವರು ಇಂತಹ ಶಿಬಿರಗಳಿಗೆ ಭಾಗವಹಿಸಿ ತಮ್ಮ ಬದುಕಿನ ದಿಕ್ಕನ್ನು ಬದಲಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಧೃಢ ಮನಸ್ಸು ಮಾಡಿ ಕುಡಿತವನ್ನು ತ್ಯಜಿಸಿ ಇತರರಿಗೆ ಮಾದರಿಯಾಗಬೇಕೆಂದರಲ್ಲದೆ ಇಂತಹ ಮಹತ್ತರವಾದ ಕೆಲಸವನ್ನು ಮಾಡಿ ಸಮಾಜವನ್ನು ಸರಿದಾರಿಗೆ ತರುತ್ತಿರುವ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಎಲ್ಲಾ ಸಿಬ್ಬಂದಿಯವರಿಗೆ, ಸಂಘ ಸಂಸ್ಥೆಗಳ ಮುಖಂಡರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

೧೯೪೧ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಲ್.ಪಿ.ರವಿಕುಮಾರ್ ಮಾತನಾಡಿ ಶಿಬಿರಕ್ಕೆ ಸೇರ್ಪಡೆಯಾಗಿರುವ ೬೦ ಮಂದಿಗೆ ಎಂಟು ದಿನಗಳ ಕಾಲ ನಿಯಮಿತವಾಗಿ ವ್ಯಾಯಾಮ ಸೇರಿದಂತೆ ಶಿಸ್ತಿನ ಜೀವನ ನಡೆಸುವಂತೆ ಭೋದನೆ ಮಾಡಿ ಅವರುಗಳು ಭವಿಷ್ಯದಲ್ಲಿ ಆರೋಗ್ಯವಂತರಾಗಿ ಬದುಕುವ ಪಾಠ ಕಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಹಂದನಹಳ್ಳಿಸೋಮಶೇಖರ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷ ವಸಂತಮ್ಮ, ಸದಸ್ಯ ಕೋಳಿಪ್ರಕಾಶ್, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ನ ನಿರ್ದೇಶಕಿ ಮಮತಾರಾವ್, ತಾಲೂಕು ನಾಮಧಾರಿಗೌಡ ಸಮಾಜದ ಅಧ್ಯಕ್ಷ ಕೆ.ಆರ್.ಅಶೋಕ್, ೧೯೪೧ನೇ ಮಧ್ಯವರ್ಜನ ಶಿಬಿರದ ಗೌರವಾಧ್ಯಕ್ಷ ಯು.ಕೃಷ್ಣಭಟ್, ಸದಸ್ಯರಾದ ಕೆ.ಎಂ.ನಾಗರತ್ನಮ್ಮ, ಎ.ಎನ್.ಸಂಪತ್‌ಕುಮಾರ್, ಹೆಚ್.ಆರ್.ನವೀನ್‌ಕುಮಾರ್ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ನ ತಾಲೂಕು ಯೋಜನಾಧಿಕಾರಿ ಪಾತಲಿಂಗಪ್ಪ, ಸಂಸ್ಥೆಯ ಭವಾನಿರಮೇಶ್, ಮಂಜುಳ, ರಜನಿಕಾಂತ್, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಶಿವಪ್ರಕಾಶ್ ಸೇರಿದಂತೆ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಮುಖಂಡರುಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular