ಮೈಸೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ೨೦೨೪ನೇ ಸಾಲಿನ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟಸಿದ್ದು, ಮೈಸೂರಿನ ದಿನೇಶ್ ಎಂಬುವರ ಅವರ ಪುತ್ರಿ, ವಿದ್ಯಾರ್ಥಿನಿ ಸುದೀಕ್ಷಾ ಎಂ.ಡಿ ರಾಜ್ಯಕ್ಕೆ ಎರಡನೇ ಟಾಪರ್ ಆಗಿದ್ದಾರೆ.
ಮರು ಮೌಲ್ಯಮಾಪನದಲ್ಲಿ ೬೨೫ಕ್ಕೆ ೬೨೪ ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದಾರೆ. ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟದಾಗ ವಿದ್ಯಾರ್ಥಿನಿ ಸುದೀಕ್ಷಾ ಎಂ.ಡಿ ಅವರಿಗೆ ೬೨೫ಕ್ಕೆ ೬೨೦ ಅಂಕಗಳು ಬಂದಿದ್ದವು. ಐದು ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದಿದ್ದ ಸುದೀಕ್ಷ ಎಂ.ಡಿ ಅವರಿಗೆ ಗಣಿತ ವಿಷಯದಲ್ಲಿ ೯೫ ಅಂಕಳು ಬಂದಿದ್ದವು.