ಬೆಂಗಳೂರು : ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧೀಜಿ ಹೆಸರು ಕೈ ಬಿಟ್ಟಿರೋದಕ್ಕೆ ಕಾಂಗ್ರೆಸ್ ಭಾರೀ ವಿರೋಧ ಮಾಡುತ್ತು. ಇದೀಗ ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿರೋ ಒಳಾಂಗಣ ಕ್ರೀಡಾಂಗಣಕ್ಕೆ ಕಾಂಗ್ರೆಸ್ ನಾಯಕ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಸ್ಟೇಡಿಯಂ ಹೆಸರು ವಿವಾದ ಇದೀಗ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡುತ್ತಿದೆ.
ಈ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದು, ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಸರನ್ನೇ ಕೈಬಿಡಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ, ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಸರನ್ನು ಯಾರಾದರೂ ತೆಗೆಯುತ್ತಾರೆ? ನಾವು ನರೇಗಾ ಹೆಸರು ಬದಲಾವಣೆ ಮಾಡಿದ್ದಕ್ಕೆ ಹೋರಾಟ ಮಾಡ್ತಿದ್ದೇವೆ. ಈಗ ನಾವೇ ಮಹಾತ್ಮ ಗಾಂಧಿ ಹೆಸರು ತೆಗೆಯುತ್ತೇವಾ ಹೇಳಿ ಎಂದು ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಮುಂದುವರೆದು ನಾವು ಮಹಾತ್ಮ ಗಾಂಧಿ ಹೆಸರು ತೆಗೆಯುತ್ತಿದ್ದೇವೆ ಅಂತ ಹೇಳುವವರು ಹುಚ್ಚರು. ಅಲ್ಲಿ ಒಂದು ಸಣ್ಣ ಕಾಂಪ್ಲೆಕ್ಸ್ ಶೆಡ್ ಇದೆ. ಅದಕ್ಕೆ ಕೆಲವರು ಪರಮೇಶ್ವರ್ ಹೆಸರು ಇಡಬೇಕೆಂದು ಪತ್ರ ಕೊಟ್ಟಿದ್ದಾರೆ. ಅದು ನನಗೂ ಗೊತ್ತಿಲ್ಲ, ನನಗೂ ಅದಕ್ಕೂ ಸಂಬಂಧ ಇಲ್ಲ. ಸಂಬಂಧಪಟ್ಟವರನ್ನ ಕೇಳಿ ಎಂದು ಹೇಳಿದ್ದೆ ಎಂದು ಹೇಳಿದ ಅವರು ಇದಕ್ಕೆಲ್ಲಾ ಬಿಜೆಪಿಯವರು ರಾಜಕೀಯ ಮಾಡಿದ್ರೆ ಹೇಗೆ..? ಮಹಾತ್ಮ ಗಾಂಧಿ ಹೆಸರು ಬದಲಾವಣೆ ಮಾಡೋಕೆ ಆಗುತ್ತಾ? ಅದೆಲ್ಲಾ ತಪ್ಪು ಕಲ್ಪನೆ ಎಂದುರ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಮಹಾತ್ಮಾ ಗಾಂಧಿ ಕ್ರೀಡಾಂಗಣ, ತುಮಕೂರು ಜಿಲ್ಲೆಯ ಏಕೈಕ ಜಿಲ್ಲಾಮಟ್ಟದ ಕ್ರೀಡಾಂಗಣ ಆಗಿದೆ. ಇಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಪ್ರಮುಖ ಕಾರ್ಯಕ್ರಮ ನಡೆಯುತ್ತಿರುತ್ತದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮರು ನಿರ್ಮಾಣ ಮಾಡಲಾಗಿದೆ.



