ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿ 270ಕ್ಕೂ ಹೆಚ್ಚು ಜನರು ಈ ಒಂದು ಅಪಘಾತದಲ್ಲಿ ಸಾವನ್ನಪ್ಪಿದ್ದರು ಇದೀಗ ಬೆಳಗಾವಿಯಲ್ಲಿ ಮತ್ತೊಂದು ಭಾರಿ ದೊಡ್ಡ ಅನಾಹುತ ತಪ್ಪಿದೆ. ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ ನಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದೆ.
ಬೆಳಗಾವಿಯಿಂದ ಮುಂಬೈಗೆ ಸ್ಟಾರ್ ಏರ್ ವಿಮಾನ ಹೊರಟಿತ್ತು. ಸ್ಟಾರ್ ಏರ್ S5111 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬೆಳಗ್ಗೆ 7:40ಕ್ಕೆ ಸ್ಟಾರ್ ಏರ್ ವಿಮಾನ ಮುಂಬೈಗೆ ತೆರಳುತ್ತಿತ್ತು ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ ತಾಂತ್ರಿಕ ದೋಷ ಹಿನ್ನೆಲೆ ತುರ್ತು ಭೂಸ್ಪರ್ಶವಾಗಿದೆ ವಿಮಾನದಲ್ಲಿದ್ದ ಎಲ್ಲ 41 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.