Saturday, May 24, 2025
Google search engine

Homeರಾಜ್ಯರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನ ರೌಡಿಸಂ: ಮಾಧ್ಯಮದವರ ಮೇಲೆ ಹಲ್ಲೆ ಮಾಡಿ ದರ್ಪ

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನ ರೌಡಿಸಂ: ಮಾಧ್ಯಮದವರ ಮೇಲೆ ಹಲ್ಲೆ ಮಾಡಿ ದರ್ಪ

ತುಮಕೂರು: ತುಮಕೂರು ನಗರದಲ್ಲಿ ಇಂದಿನಿಂದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆರಂಭವಾಗಲಿದ್ದು, ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ಚಿತ್ರೀಕರಿಸಲು ಹೋದ ಮಾದ್ಯಮದವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಟ್ರ್ಯಾಕ್ ಸೂಟ್ ಹಾಗೂ ಸಮವಸ್ತ್ರ ವಿತರಣೆಯಲ್ಲಿ ಅವ್ಯವಸ್ಥೆ ಉಂಟಾಗಿದೆ.

ಕ್ರೀಡಾಪಟುಗಳಿಗೆ ಕಳಪೆ ಗುಣಮಟ್ಟದ ಟೀ ಶರ್ಟ್ ವಿತರಣೆ ಮಾಡಿ ಗೋಲ್ ಮಾಲ್ ಮಾಡಿರುವ ಆರೋಪ ಕೇಳಿಬಂದಿದೆ.

ಆರು ತಿಂಗಳ ಹಿಂದೆಯೇ ಸಂಘದ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ರೂ ಸರಿಯಾದ ಸೈಜ್ ಗಳ ಟೀ ಶರ್ಟ್ ನೀಡಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.

ಇದರಿಂದ ಕ್ರೀಡಾ ಕೂಟಕ್ಕೆ ಆಗಮಿಸಿದವರು ರೊಚ್ಚಿಗೆದು ಆಕ್ರೋಶ ಹೊರ ಹಾಕಿದ್ದು, ಇದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ರಾಜ್ಯಧ್ಯಕ್ಷ ಷಡಕ್ಷರಿ ಹಲ್ಲೆ ನಡೆಸಿದ್ದಾರೆ.

ಸುದ್ದಿ ಮಾಡದಂತೆ ಷಡಕ್ಷರಿ ಅಂಡ್ ಟೀಂ ಆವಾಜ್ ಹಾಕುವ ಮೂಲಕ ದರ್ಪ ತೋರಿದ್ದಾರೆ.

RELATED ARTICLES
- Advertisment -
Google search engine

Most Popular