ಬೆಂಗಳೂರು : ರಾಜ್ಯದ ಸಿನಿ ಪ್ರೇಕ್ಷಕರಿಗೆ ಸರ್ಕಾರ ಇದೀಗ ಸಿಹಿ ಸುದ್ದಿ ಒಂದನ್ನು ನೀಡಲು ಮುಂದಾಗಿದ್ದು, ಇನ್ನು ಮುಂದೆ ಯಾವುದೇ ಸಿನಿಮಾ ರಿಲೀಸ್ ಆದರೂ 200 ರೂಪಾಯಿ ಮಿತಿ ಮೀರದಂತೆ ಆದೇಶ ಹೊರಡಿಸಲು ಸಿದ್ಧವಾಗಿದೆ. ಕರ್ನಾಟಕ ಸರ್ಕಾರ ಒಂದು ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ. ಸಿನಿಮಾದ ಟಿಕೆಟ್ ದರ 200 ರೂಪಾಯಿ ಮಿತಿ ದಾಟದಂತೆ ಆದೇಶ ಇದೆ. ಈ ಆದೇಶಕ್ಕೆ ವಿರೋಧವಿದ್ದರೆ ತಿಳಿಸುವಂತೆ ಸರ್ಕಾರ ಸೂಚಿಸಿದೆ. ಈ ಆದೇಶ ಇನ್ನು ಎರಡರಿಂದ ಮೂರು ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ.
ಈ ವಿಚಾರವಾಗಿ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಿನಿಮಾದ ಟಿಕೆಟ್ ದರ 200 ರೂಪಾಯಿ ಮಿತಿ ದಾಟದಂತೆ ಆದೇಶ ಇದೆ. ಈ ಆದೇಶಕ್ಕೆ ವಿರೋಧವಿದ್ದರೆ ತಿಳಿಸುವಂತೆ ಸರ್ಕಾರ ಸೂಚಿಸಿದೆ. ಈ ಆದೇಶ ಇನ್ನು ಎರಡರಿಂದ ಮೂರು ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ ಎಂಬುದು ನರಸಿಂಹಲು ಅವರ ಮಾತು. ಈ ರೀತಿಯ ಬೆಲೆ ಏರಿಕೆಯನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ಆದೇಶ ಜಾರಿಗೆ ಬಂದರೆ ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಾರೆ. ಸದ್ಯ ವೀಕೆಂಡ್ನಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ‘ಕೂಲಿ’ ಸಿನಿಮಾದ ಟಿಕೆಟ್ ದರ 400 ರೂಪಾಯಿಯಿಂದ ಸಾವಿರ ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಬುಕ್ ಮೈ ಶೋ ತೆರಿಗೆ ಸೇರಿದರೆ ಈ ದರ ಮತ್ತಷ್ಟು ಹೆಚ್ಚಲಿದೆ. ಇನ್ನು ಎರಡು ಮೂರು ದಿನಗಳಲ್ಲಿ ಆದೇಶ ಜಾರಿಗೆ ಬಂದರೆ ಪ್ರೇಕ್ಷಕರು ನಿಟ್ಟುಸಿರು ಬಿಡಲಿದ್ದಾರೆ.